ಬಂಟ್ವಾಳ: ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರ ಆಶ್ರಯದಲ್ಲಿ ಗೋಪೂಜೆ,.ತುಳಸಿ ಪೂಜೆ, ಭಾರತಮಾತಾ ಪೂಜನಾ ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶಾರದಾ ದಾಮೋದರ ಆಚಾರ್ಯ ವಹಿಸಿದ್ದರು. ಧಾರ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿದರು. ಕರ್ನಾಟಕ ಕ್ರೀಡಾರತ್ನ ಕಡೇಶಿವಾಲಯದ ಪ್ರತಿಭೆ ಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಸಂಪೂರ್ಣ ಕಾರ್ಯಕ್ರಮ ಕೇವಲ ದೀಪದ ಬೆಳಕಿನಿಂದ ನಡೆದಿದ್ದು ವಿಶೇಷ. ಹಿಂ.ಜಾ.ವೇ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ್ ಸ್ವಾಗತಿಸಿದರು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಭಾಸ್ಕರ ಮುಂಡಾಲ ವಂದಿಸಿದರು. ದುರ್ಗಾಪ್ರಸಾದ್ ಅಮೈ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…