ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವತಿಯಿಂದ ತುಂಬೆ ಶಾಲಾ ಪರಿಸರದಲ್ಲಿ ಪರಿಸರ ಸ್ವಚ್ಛತಾ ಅಭಿಯಾನ ನಡೆಯಿತು. ಇದನ್ನು ಉದ್ಘಾಟಿಸಿದ ಸಂಘದ ಅಧ್ಯಕ್ಷ ಐತಪ್ಪ ಕುಲಾಲ್ ಜಾತಿ ಸಂಘಟನೆಗಳು ಕೇವಲ ಜಾತಿಗೆ ಸೀಮಿತವಾಗದೆ ಇಂತಹ ಸಾಮಾಜಿಕ ಕಾರ್ಯಕ್ರಮಗನ್ನು ನಡೆಸುವುದರ ಮೂಲಕ ತುಂಬೆ ಕುಲಾಲ ಸೇವಾ ಸಂಘ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಗೌರವಾಧ್ಯಕ್ಷರಾದ ನೀಲಪ್ಪ ಸಾಲಿಯಾನ್, ಲಿಂಗಪ್ಪ ಕುಲಾಲ್, ಸಂಚಾಲಕರಾದ ಶೇಷಪ್ಪ ಮಾಸ್ಟರ್, ಮಹಿಳಾ ಘಟಕದ ಅಧ್ಯಕ್ಷರಾದ ಉಮಾವತಿ ಲಿಂಗಪ್ಪ, ಗೌರವಾಧ್ಯಕ್ಷರಾದ ಭಾರತಿ ಶೇಷಪ್ಪ, ಪದಾಧಿಕಾರಿಗಳಾದ ಸಂದೀಪ್ ಕುಲಾಲ್, ಭಾಸ್ಕರ್ ಕುಲಾಲ್, ಹರೀಶ್ ಪೆರ್ಲಬೈಲ್, ದಿನೇಶ್ ಕುಲಾಲ್, ಗೋಪಾಲ್ ಬೆದ್ರಾಡಿ, ಸದಾನಂದ ಕುಲಾಲ್,ಗೌರೀಶ್ ಕುಲಾಲ್, ಕೃಷ್ಣ ಕುಲಾಲ್, ಮೋನಪ್ಪ ಮಜಿ, ಚಿದಾನಂದ ಮಜಿ, ಸೀತಾರಾಮ,ಕೀರ್ತಿಶ್, ಪುನೀತ್, ಪವನ್, ಭಾಸ್ಕರ್, ಚಿಂತನ್ ಚಂದ್ರ ರಾಜ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಾದ ಶೋಭಾ ಸದಾನಂದ್, ಶೋಭಾ ಭಾಸ್ಕರ್, ವಸಂತಿ ಕೃಷ್ಣ, ಸಾವಿತ್ರಿ ಶಿವಕುಮಾರ್ ಹಾಗೂ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಯಮುನಾ ವಂದಿಸಿದರು.