ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅನ್ಸ್ ಕ್ಲಬ್ ವತಿಯಿಂದ ಮಕ್ಕಳ ದಿನವನ್ನು ರೋಟರಿ ಸಾಧನ ಸಭಾಂಗಣದಲ್ಲಿ ಆಚರಿಸಲಾಯಿತು, ಕಾರ್ಯಕ್ರಮವನ್ನು ರೋಟರಿ ಅಧ್ಯಕ್ಷರಾದ ಪದ್ಮನಾಭ ರೈ ಉದ್ಘಾಟಿಸಿ ಶುಭ ಹಾರೈಸಿದರು,
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕ್ರತೆ ಜಯಲಕ್ಷ್ಮಿ ಹಾಗೂ ಕೊರೊನ ವಾರಿಯರ್ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವಾಣಿ ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಷಯಗಳ ಬಗ್ಗೆ ಭಾರತಿ ಶೇಷಪ್ಪ, ಡಾ. ಫಹೀನ್ ಡಾ. ಮುಷಾಕಿರ ಹುಸೈನ್ ಮಾಹಿತಿ ನೀಡಿದರು. ಈ ಸಂದರ್ಭ ಕಾರ್ಯದರ್ಶಿ ಕಿಶೋರ್, ಅನ್ಸ್ ಅಧ್ಯಕ್ಷೆ ಸವಿತಾ ಚಿತ್ತರಂಜನ್ ಶೆಟ್ಟಿ, ಶಾಂತರಾಜ್, ಚಿತ್ತರಂಜನ್ ಶೆಟ್ಟಿ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಪಲ್ಲವಿ ಕಾರಂತ್ ನಿರೂಪಿಸಿದರು ಜತೆ ಕಾರ್ಯದರ್ಶಿ ಜಶ್ಮಿ ಕಿಶೋರ್ ವಂದಿಸಿದರು.