ಬಂಟ್ವಾಳ : ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಕಥೊಲಿಕ್ ಸಭಾದ ನೂತನ ಅಧ್ಯಕ್ಷರಾಗಿ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಹಾಗೂ ಕಾರ್ಯದರ್ಶಿಯಾಗಿ ಶಿಕ್ಷಕಿ ಐಡಾ ಲಸ್ರಾದೊ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ಕಥೊಲಿಕ್ ಸಭಾ ಮೊಗರ್ನಾಡ್ ವಲಯದ ಅಧ್ಯಕ್ಷರಾದ ಆಂಟನಿ ಡಿಸೋಜ, ಎಮಿಲ್ಡಾ ಡಿಸೋಜ ಮತ್ತು ಡೆನ್ನಿಸ್ ಶಂಭೂರ್ ರವರು ಚುನಾವಣಾಧಿಕಾರಿಗಳಾಗಿ ಆಗಮಿಸಿ, ಪ್ರಕ್ರಿಯೆ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ವಿನ್ಸೆಂಟ್ ಡಿಸೋಜ, ಜೊತೆ ಕಾರ್ಯದರ್ಶಿಯಾಗಿ ಶಿಕ್ಷಕಿ ರೀಟಾ ಮೊರಾಸ್, ಖಜಾಂಜಿಯಾಗಿ ಕಿಶೋರ್ ಸಂತೋಷ್ ಪಿಂಟೊ, ಆಮ್ಚೊ ಸಂದೇಶ್ ಪ್ರತಿನಿಧಿ ಪ್ರೀಯಾ ಪಿಂಟೊ, ಸ್ತ್ರೀ ಸಂಚಾಲಕಿಯಾಗಿ ಜೋಸ್ಪಿನ್ ಲಸ್ರಾದೊ, ರಾಜಕೀಯ ಸಂಚಾಲಕರಾಗಿ ಸ್ಟೀವನ್ ಆಲ್ವಿನ್ ಪಾಯ್ಸ್, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ರೋಷನ್ ಬೊನಿಫಾಸ್ ಮಾರ್ಟಿಸ್ ಆಯ್ಕೆಯಾದರು.
ಕಳೆದ ಎಪ್ರಿಲ್‌ನಲ್ಲಿ ಈ ವಾರ್ಷಿಕ ಚುನಾವಣೆಯು ನಡೆಯಬೇಕಾಗಿದ್ದು, ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರ ಆದೇಶದಂತೆ ಭಾನುವಾರ ನಡೆಯಿತು.
ಚರ್ಚ್ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ಮಾತನಾಡಿ, ಕಳೆದ ಅವಧಿಯ ಕಥೋಲಿಕ್ ಸಭಾದ ಕಾರ್ಯಕಾರಿ ಸಮಿತಿಯ ಕಾರ್ಯವೈಖರಿಯನ್ನು ಅಭಿನಂದಿಸಿದರು, ನೂತನ ಅಧ್ಯಕ್ಷ, ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಎಲಿಯಾಸ್ ಪಿರೇರಾ ಮತ್ತು ಕಾರ್ಯದರ್ಶಿ ಮೇರಿ ಡಿಸೋಜ ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಸ್ಥಾಪಕ ಅಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.