ಬಂಟ್ವಾಳ

ತೆಂಗು ಸೌಹಾರ್ದ ಸಹಕಾರಿ ಬಂಟ್ವಾಳ ವಾರ್ಷಿಕ ಮಹಾಸಭೆ

ಜಾಹೀರಾತು

ಬಂಟ್ವಾಳ : ಕರ್ನಾಟಕ ತೆಂಗು ಸೌಹಾರ್ದ ಸಹಕಾರಿ ಬಂಟ್ವಾಳ ಇದರ  ವಾರ್ಷಿಕ ಮಹಾಸಭೆ ನ. ೧೦ರಂದು ಬಿ. ಸಿ. ರೋಡ್ ರೋಟರಿ ಸಭಾಂಗಣದಲ್ಲಿ  ನಡೆಯಿತು. ಮಹಾಸಭೆಯಲ್ಲಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ . ಪ್ರಕಾಶ್ ಕಾರಂತ ತೆಂಗು – ತಾಳೆ ಬೆಳೆ ಶಿಬಿರವನ್ನು  ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭಾಧ್ಯಕ್ಷೆ ವಹಿಸಿದ್ದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ ಮಾತನಾಡಿ ಕೃಷಿ ವಿಚಾರದ  ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಇದೆ ಎಂದರು.  ಕ್ಲಬ್  ಕಾರ್ಯದರ್ಶಿ ವಾಣಿ ಕಾರಂತ್ ಉಪಸ್ಥಿತರಿದ್ದರು.       ತೆಂಗು ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜಾ ಬಂಟ್ವಾಳ್ ಮಹಾಸಭೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸದಾಶಿವ ಬಂಗುಲೆ,  ವಿಠ್ಠಲ ಬಂಗುಲೆ, ನಾಗೇಶ್ ಕಲ್ಯಾರ್, ಪ್ರೇಮನಾಥ ಶೆಟ್ಟಿ, ಶರಣಪ್ಪ ಉಮರಗಿ,  ಶಶಿಕಲಾಕೃಷ್ಣ, ಅಂಬಿಕಾ ಹರೀಶ್ ಉಪಸ್ಥಿತರಿದ್ದರು.  ಕಾರ್ಯದರ್ಶಿ ಹರ್ಷಿತ್ ಕುಮಾರ್ ಪ್ರಸ್ತಾವನೆ ನೀಡಿ ವರದಿ ವಾಚಿಸಿದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.ಮಾಹಿತಿ ಶಿಬಿರದಲ್ಲಿ ಸಿಪಿಸಿಆರ್‌ಐ ವಿಜ್ಞಾನಿ ಡಾ. ಮಹೇಶ್ವರಪ್ಪ ಪ್ರೊಜೆಕ್ಟರ್ ಮೂಲಕ ತೆಂಗು, ತಾಳೆ ಬೆಳೆ  ಸಮಗ್ರ ಮಾಹಿತಿ ನೀಡಿದರು ಬಂಟ್ವಾಳ ತೋಟಗಾರಿಕೆ ಹಿರಿಯ  ನಿರ್ದೇಶಕ ಪ್ರದೀಪ್ ಡಿಸೋಜಾ ಸಮಗ್ರ ಕೃಷಿ ಮಾಹಿತಿಯನ್ನು ನೀಡಿ, ಸಂವಾದ ನಡೆಸಿಕೊಟ್ಟರು.  ಡ್ರಿಪ್ಸ್ ಸಾಮಗ್ರಿಗಳ ಪ್ರದರ್ಶನ, ವಿವಿಧ ತರಕಾರಿ ಬೀಜಗಳ ಮಾರಾಟ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು. ಸಮಗ್ರ ಕೃಷಿ ನಿರ್ವಾಹಕ ನಿರಂಜನ ಸೇಮಿತ ಬಡಗಬೆಳ್ಳೂರು ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಅಪರಾಹ್ನ ಲೊರೆಟ್ಟೊದಲ್ಲಿ ತಾಳೆ ಬೆಳೆ ತೋಟ ಕ್ಷೇತ್ರ ದರ್ಶನ ನಡೆಸಲಾಯಿತು. ಕರ್ನಾಟಕ ತೆಂಗು ಸೌಹಾರ್ದ ಸಹಕಾರಿ ಬಿ.ಸಿ.ರೋಡ್ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ, ತೋಟಗಾರಿಕಾ ಇಲಾಖೆ ಬಂಟ್ವಾಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ