ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ, ಗುಂಡಿಗಳನ್ನು ಒಮ್ಮೆ ತೇಪೆ ಹಾಕಿ ಬಳಿಕ ಮೊದಲಿನಂತಾಗುವ ವ್ಯವಸ್ಥೆಗಳು ಇಂದು ಇವೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಮಾನ ಮನಸ್ಕ ನಾಗರಿಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬಿ.ಸಿ.ರೋಡಿನ ಫ್ಲೈಓವರ್ ಬಳಿ ಪ್ರತಿಭಟನೆ ಮಂಗಳವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಹೆದ್ದಾರಿಯ ಬಿ.ಸಿ.ರೋಡ್ ಪೇಟೆ ಹಾದುಹೋಗುವ ಭಾಗದಲ್ಲಿ ಕಾಂಕ್ರೀಟ್ ಹಾಕುವ ಮೂಲಕ ಹಾಗೂ ಪ್ರತಿ ಬಾರಿಯೂ ಹೊಂಡ ಬೀಳುವ ಕುರಿತು ವೈಜ್ಞಾನಿಕ ಕಾರಣಗಳನ್ನು ಹುಡುಕುವ ಮೂಲಕ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಸಮಾನ ಮನಸ್ಕ ಸಂಘಟನೆಯ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎಂ.ಪ್ರಭಾಕರ ದ್ವೆವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ಸಾಮಾಜಿಕ ಮುಖಂಡ ಮೊಹಮ್ಮದ್ ಶಾಫಿ, ರಿಕ್ಷಾ ಡ್ರೈವರ್ ಅಸೋಸಿಯೇಷನ್ ಮುಂದಾಳು ಪುತ್ತುಮೋನು ಮಾತನಾಡಿದರು. ಪ್ರಮುಖರಾದ ನ್ಯಾಯವಾದಿ ನೋಟರಿ ಚಂದ್ರಶೇಖರ ಪೂಜಾರಿ, ಸುರೇಶ್ ಕುಮಾರ್ ಬಂಟ್ವಾಳ್, ಹಾರೂನ್ ರಶೀದ್, ಪ್ರೇಮನಾಥ ಕೆ, ಶ್ರೀನಿವಾಸ ಭಂಡಾರಿ, ಇಬ್ರಾಹಿಂ ನಾವೂರು, ಇಸ್ಮಾಲಿ ಅರಬಿ ಕೆಳಗಿನಪೇಟೆ, ಸವಾದ್ ಬಂಟ್ವಾಳ, ತಿಮ್ಮಪ್ಪ ಪೂಜಾರಿ ಸಿದ್ದ ಕಟ್ಟೆ, ನಮೇಶ್ ಶೆಟ್ಟಿ ಕುರಿಯಾಳ, ರಮೇಶ್ ಕುಲಾಲ್ ದ್ವೆಪಲ, ಇಕ್ಬಾಲ್ ಪಣಕಜೆ, ಗುಣಕರ್ ಪಣಕಜೆ, ಸುರೇಶ್ ಬಸ್ತಿಕೋಡಿ, ಅಬ್ದುಲ್ ಲತೀಫ್ ತುಂಬೆ, ಹುಸ್ವೆನಾರ್ ಪರ್ಲಿಯಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.