ಬಂಟ್ವಾಳ: ಜೇಸಿ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವುದಲ್ಲದೆ ಸಮಾಜದ ಅಭಿವೃದ್ಧಿ ಯು ಸಾಧ್ಯವಾಗುತ್ತದೆ ಎಂದು ಜೇಸಿ ವಲಯ ಕಾರ್ಯಕ್ರಮ ನಿರ್ದೇಶಕರಾದ ಅಶ್ವಿನಿ ಐತಾಳ್ ಹೇಳಿದರು.
ಜೋಡುಮಾರ್ಗ ನೇತ್ರಾವತಿ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದ ಮಾತುಗಾರಿಕೆ ಕಲೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾನಾಡಿದರು.
50 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದ ಕಾರ್ಯಾಗಾರವನ್ನು ವಲಯ ತರಬೇತುದಾರರಾದ ರಾಮಚಂದ್ರ ರಾವ್ ಮತ್ತು ರಾಧಾಕೃಷ್ಣ ಬಂಟ್ವಾಳ ನಡೆಸಿಕೊಟ್ಟರು. ಲಾಕ್ ಡೌನ್ ಸಮಯದಲ್ಲಿ ಆಯೋಜಿಸಿದ್ದ ವಿಡಿಯೋ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
ಪೃಥ್ವೀಶ್ ಧರ್ಮಸ್ಥಳ ಪ್ರಥಮ, ರಾಘವೇಂದ್ರ ಕಾರಂತ್ ಮೊಗರ್ನಾಡು ದ್ವಿತೀಯ,.ಯಶವಂತ ಅನಂತಾಡಿ ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಡಾ.ಕೃಷ್ಣಮೂರ್ತಿ, ಕು.ಪ್ರಜ್ಞಾ, ಜ್ಯೋತಿ ಎಚ್. ರಾವ್ ಹಾಗೂ ರಿಷಿಕಾ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.ಜೆಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾದ ಶ್ರೀನಿಧಿ ಭಟ್ ಟಿ.ಎನ್. ಹಾಗೂ ನಿಕಟಪೂರ್ವ ಅಧ್ಯಕ್ಷ ಹರ್ಷರಾಜ್, ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ ಆಳ್ವ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶನ್ ಎನ್. ರಾವ್ ವಂದಿಸಿದರು. ನಿರ್ದೇಶಕರಾದ ಗಾಯತ್ರಿ ಲೋಕೇಶ್ ಮತ್ತು ಶೈಲಜಾ ರಾಜೇಶ್ ಕಾರ್ಯಕ್ರಮ ಸಂಯೋಜಿಸಿದ್ದರು.