ಕವರ್ ಸ್ಟೋರಿ

ಕುತೂಹಲದ ಘಟ್ಟಕ್ಕೆ ತಲುಪಿದ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಯಾರಿಗೆ ಸಿಗಲಿದೆ ಅಧಿಕಾರ?

ಬಂಟ್ವಾಳ ಪುರಸಭೆ

ಜಾಹೀರಾತು

ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್

ಕೊನೆಗೂ ಬಂಟ್ವಾಳ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದೆ. ಈಗಾಗಲೇ ಹಲವು ಕಸರತ್ತುಗಳು ನಡೆದಿದ್ದು, ಅಧ್ಯಕ್ಷ ಸ್ಥಾನ ಯಾರಿಗೆ ಲಭಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ 10.30ಕ್ಕೆ ಈ ಎಲ್ಲ ಕುತೂಹಲಗಳ ಕ್ಲೈಮ್ಯಾಕ್ಸ್ ಆರಂಭಗೊಳ್ಳಲಿದ್ದು, ಆ ಹೊತ್ತಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಆಗಬೇಕು.

ಬಳಿಕ 12.30ಕ್ಕೆ ನಾಮಪತ್ರ ಪರಿಶೀಲನೆ. ಆಗ ಅಭ್ಯರ್ಥಿಗಳಿಗೆ  ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ. ಅಲ್ಲಿಯವರೆಗೆ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗುತ್ತಾರೆ ಎಂಬ ಸಸ್ಪೆನ್ಸ್ ಉಳಿಯುವ ಸಾಧ್ಯತೆ ಇದೆ. ಅವಿರೋಧ ಆಯ್ಕೆಯಾಗದೇ ಇದ್ದರೆ, ಸ್ಪರ್ಧೆಯು ಪೌರಸಭೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ 1965ರ ಪ್ರಕಾರ ನಡೆಯುತ್ತದೆ. ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ಶಾಸಕರು ಚುನಾಯಿತ ಸದಸ್ಯರೊಂದಿಗೆ ಮತದಾನ ಮಾಡಲು ಅರ್ಹರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ಬಿ ಮಹಿಳೆ ಅರ್ಹರಾಗಿದ್ದಾರೆ. 

ಜಾಹೀರಾತು

ಅತಂತ್ರ ಪುರಸಭೆ: 2018, ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರಕಿತ್ತು. 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿದ್ದವು. ಚುನಾವಣೆ ನಡೆದರೆ, ಸಂಸದ, ಶಾಸಕರ ಮತಬಲದಿಂದ ಬಿಜೆಪಿಗೆ 13 ಸಂಖ್ಯಾಬಲ ದೊರಕುತ್ತದೆ.

ನಿರ್ಣಾಯಕವಾಗುವುದೇ ಎಸ್.ಡಿ.ಪಿ.ಐ? ಎಸ್.ಡಿ.ಪಿ.ಐ. ನಿರ್ಣಾಯಕ ಸ್ಥಾನ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಅರ್ಹ ಅಭ್ಯರ್ಥಿ ಇದ್ದು, ಎಸ್.ಡಿ.ಪಿ. ಐ ಯಾರಿಗೆ ಮತ ಹಾಕುತ್ತದೆ ಅಥವಾ ಮತ ಹಾಕದೆ ಉಳಿಯುತ್ತದೆಯೇ ಎಂಬುದರ ಮೇಲೆ ಆಯ್ಕೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ ಮತ್ತು ಎಸ್.ಡಿ.ಪಿ.ಐ ಗಳಲ್ಲಿ ಒಂದಿಬ್ಬರನ್ನು ಬಿಟ್ಟರೆ ಎಲ್ಲವೂ ಹೊಸ ಮುಖಗಳೇ. ಆದರೆ ಕಾಂಗ್ರೆಸ್ ನಲ್ಲಿ ಮರು ಆಯ್ಕೆಗೊಂಡ ಸದಸ್ಯರ ಸಂಖ್ಯೆ ಅಧಿಕವಿದ್ದು, ಸಹಜವಾಗಿಯೇ ಆಕಾಂಕ್ಷಿಗಳೂ ಅಧಿಕವಿರುವ ಕಾರಣ ಕ್ಷಣ ಕ್ಷಣವೂ ಕುತೂಹಲ ಕೆರಳಿಸುವಂತೆ ಚುನಾವಣೆ ಮಾಡಿದೆ. ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿ, ಸ್ಪರ್ಧೆಗೊಳಗಾಗಿ ನೂತನವಾಗಿ ಆಯ್ಕೆಯಾಗುವ ಅಧ್ಯಕ್ಷ, ಉಪಾಧ್ಯಕ್ಷರು, ಸಾರ್ವಜನಿಕರಿಗೆ ಬೇಕಾದ ಭ್ರಷ್ಟಾಚಾರರಹಿತ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನಡೆಸುವತ್ತಲೂ ಇದೇ ರೀತಿ ಮುಂದಾಗಬೇಕು ಎಂಬುದು ಜನರ ಬೇಡಿಕೆಯಾಗಿದೆ. 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ