ಉಪ್ಪಿನಂಗಡಿ: ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಪುಳಿತ್ತಡಿಯ ಸಮೀಪ ಮಂಗಳವಾರ ರಾತ್ರಿ ನಡೆದಿದೆ. ಬಜತ್ತೂರು ಗ್ರಾಮದ ಪಂರ್ದಾಜೆಯ ನಾರಾಯಣ ಗೌಡ (40) _ಮೃತ ಬೈಕ್ ಸವಾರ.
ಮಂಗಳವಾರ ರಾತ್ರಿ ಸುಮಾರು ಏಳೂವರೆಯ ಸುಮಾರಿಗೆ ಉಪ್ಪಿನಂಗಡಿಯ ಕಡೆಯಿಂದ ಮನೆಗೆ ಹಿಂದಿರುಗುವ ಮಧ್ಯೆ ಪುಳಿತ್ತಡಿ ಬಳಿಯ ಪದಾಳ ದೇವಾಲಯ ಸಮೀಪ ಇವರ ಬೈಕ್ ಗೆ ಪೆರಿಯಡ್ಕ ಕಡೆಯಿಂದ ಹಳೆಗೇಟು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…