ಜಿಲ್ಲಾ ಸುದ್ದಿ

ಬಂಟ್ವಾಳದ ಐದು ಸೇರಿದಂತೆ ಒಟ್ಟು 38 ಸಾಧಕ ವ್ಯಕ್ತಿ, ಸಂಘ, ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಸುಬ್ರಹ್ಮಣ್ಯ ಭಟ್

ಸೇಸಪ್ಪ ಟೈಲರ್

ಚೇತನ್ ರೈ ಮಾಣಿ

ಸತ್ತಾರ್ ಗೂಡಿನಬಳಿ

ಬಂಟ್ವಾಳ ತಾಲೂಕಿನ ನಾಲ್ವರು ಸಾಧಕರು ಮತ್ತು ಒಂದು ಸಂಘಟನೆ ಸೇರಿ ಜಿಲ್ಲೆಯ 38 ಸಾಧಕರು, ಸಂಘ, ಸಂಸ್ಥೆಗಳಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1ರಂದು ನೀಡಲಾಗುವುದು.

ಬಂಟ್ವಾಳ ತಾಲೂಕಿನ ನವೋದಯ ಮಿತ್ರ ಕಲಾವೃಂದ (ರಿ), ನೆತ್ತರಕೆರೆ ಸಂಘ ಹಾಗೂ ಸುಬ್ರಹ್ಮಣ್ಯ ಭಟ್ ಮಂಜಿನಡ್ಕ ಅವರಿಗೆ ಸಮಾಜಸೇವೆ ವಿಭಾಗದಲ್ಲಿ, ರಂಗಭೂಮಿ ಮತ್ತು ಚಿತ್ರನಟ ಚೇತನ್ ರೈ ಮಾಣಿ ಮತ್ತು ನೇತ್ರಾವತಿವೀರ ಎಂದೇ ಖ್ಯಾತವಾಗಿರುವ ಮುಳುಗುತಜ್ಞ ಗೂಡಿನಬಳಿಯ ಅಬ್ದುಲ್ ಸತ್ತಾರ್, ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಸೇಸಪ್ಪ ಪೂಜಾರಿ ಅವರಿಗೆ ಈ  ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಉಳಿದಂತೆ ಪ್ರೊ. ಎ.ವಿ.ನಾವಡ (ಸಾಹಿತ್ಯ/ ಶಿಕ್ಷಣ), ಡಾ. ಯು.ವಿ.ಶೆಣೈ (ವೈದ್ಯಕೀಯ), ದೊಡ್ಡಣ್ಣ ಬರೆಮೇಲು (ಕ್ರೀಡೆ), ಕೆ.ವಿಶ್ವನಾಥ ಪೈ (ಕೃಷಿ), ನಯನ ವಿ.ರೈ (ನೃತ್ಯ), ಬಿ.ಟಿ.ರಂಜನ್ (ಪತ್ರಿಕೋದ್ಯಮ), ಚಂದ್ರಶೇಖರ ಹೆಗ್ಡೆ (ಕಲೆ), ಸುಂದರ ದೇವಾಡಿಗ (ವಾದ್ಯ), ಡಾ. ವೇಣುಗೋಪಾಲ ಶರ್ಮ (ವೈದ್ಯಕೀಯ ಸೇವೆ), ಡಾ. ವೈ. ಉಮಾನಾಥ ಶೆಣೈ (ಇತಿಹಾಸಕಾರರು), ವೀರಕೇಸರಿ ಧರ್ಮಸ್ಥಳ (ಸಮಾಜಸೇವೆ), ಗಣೇಶ್ ಕೊಲೆಕಾಡಿ (ಯಕ್ಷಗಾನ), ಗಂಗಯ್ಯ ಪರವ (ದೈವಪಾತ್ರಿ), ಭಾಸ್ಕರ್ (ಕ್ರೀಡೆ), ವಿದ್ಯಾ ವಿನಾಯಕ ಯುವಕ ಮಂಡಲ ಹಳೆಯಂಗಡಿ (ಸಾಮಾಜಿಕ), ಎ.ಕೆ.ಮೊಯ್ದೀನ್ ಹಾಜಿ (ಸಮಾಜಸೇವೆ), ಕೆ.ಸೀತಾರಾಮ  ಬಂಗೇರ (ಸಾಮಾಜಿಕ ಮತ್ತು ಧಾರ್ಮಿಕ), ಯೋಗೀಶ್ ಕಾಂಚನ್ (ಸಾಹಿತ್ಯ), ಬಂಟರ ಸಂಘ ಸುರತ್ಕಲ್ (ಸಮಾಜಸೇವೆ), ಪದ್ಮನಾಭ ಸುರತ್ಕಲ್ (ಶಿಲ್ಪಕಲೆ), ಕದ್ರಿ ಕ್ರಿಕೆಟರ್ಸ್ (ಸಮಾಜಸೇವೆ), ಡಾ.ಎಂ.ಮುರಳಿಕುಮಾರ್ (ನಾಟಿವೈದ್ಯ), ಹ್ಯೂಮನ್ ರೈಟ್ ಫೆಡರೇಶನ್ ಆಫ್ ಇಂಡಿಯಾ ಮಂಗಳೂರು (ಸಮಾಜಸೇವೆ), ಪ್ರಜ್ವಲ್ ಯುವಕ ಮಂಡಲ ಸೂಟರ್ ಪೇಟೆ (ಸಾಮಾಜಿಕ), ಪ.ಜಾತಿ, ಪ.ಪಂಗಡ ಜಾತಿಗಳ ನಾಗರಿಕ ಜಾಗೃತಿ ಸಮಿತಿ (ಸಮಾಜಸೇವೆ), ಫ್ರಾನ್ಸಿಸ್ ಮ್ಯಾಕ್ಸಿಮ್ ಮೋರಾಸ್ (ಸಮಾಜಸೇವೆ), ಅನಂತಪ್ರಭು ಜಿ (ಸಮಾಜಸೇವೆ), ಶ್ರೀನಿವಾಸ ನಾಯಕ್ (ದೃಶ್ಯಮಾಧ್ಯಮ), ಜಿನ್ನಪ್ಪ ಗೌಡ (ಪತ್ರಿಕೋದ್ಯಮ), ಕಸ್ತೂರ್ಬಾ ಸಂಜೀವಿನಿ ಮಹಿಳಾ ಸಂಘ ಬೆಳಾಲು (ಕೃಷಿ), ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮಂಜೇಶ್ವರ (ಸಮಾಜಸೇವೆ  ಗಡಿನಾಡು), ಸುರೇಶ್ ಶ್ಯಾಮ್ ನೇರಂಬಳ್ಳಿ (ಹೊರನಾಡ ಕನ್ನಡಿಗ ಸಮಾಜಸೇವೆ), ಜೈ ಭಾರತಿ ತರುಣ ವೃಂದ ಊರ್ವ (ಸಮಾಜಸೇವೆ)

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts