ವಾರದ ಅವಧಿಯಲ್ಲಿ ಬಂಟ್ವಾಳ ಮತ್ತು ಮೇಲ್ಕಾರ್ ನಲ್ಲಿ ಭೀಕರ ಹತ್ಯೆ ಘಟನೆಗಳು ಇನ್ನೂ ಹಸಿಯಾಗಿರುವಂತೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಮತ್ತೊಂದು ದಾಳಿ ಸಂಭವಿಸಿದೆ. ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ನುಗ್ಗಿ ಮಾರಣಾಂತಿಕವಾಗಿ ದಾಳಿ ನಡೆಸಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫರಂಗಿಪೇಟೆಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟುಡಿಯೋ ಮಾಲಕ, ಬಿಜೆಪಿ ಪುದು ಶಕ್ತಿ ಕೇಂದ್ರದ ಸಾಮಾಜಿಕ ಜಾಲ ತಾಣದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರ ಮೇಲೆ ತಂಡವೊಂದು ಬಂದು ದಾಳಿ ನಡೆಸಿದೆ.
ರಾತ್ರಿ ಸುಮಾರು 7.50 ರ ಸುಮಾರಿಗೆ ಕಟ್ಟಡದ ಮೊದಲ ಮಹಡಿಯಲ್ಲಿರುವ ಅವರ ಸ್ಟುಡಿಯೋಗೆ ನುಗ್ಗಿ ಮಾರಾಕಾಯುಧಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿ ರಾತ್ರಿ ವೇಳೆ ಅವರ ಸ್ಟುಡಿಯೋ ಮಾತ್ರ ತೆರೆದಿದ್ದು ಈ ಸಂದರ್ಭದಲ್ಲಿ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಿಂದ ಅವರ ತಲೆ ಹೊಟ್ಟೆ ಮತ್ತಿತರ ಭಾಗಗಳಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ದಿನೇಶ್ ಕೊಟ್ಟಿಂಜ ಅವರು ಪೊಟೋ ಗ್ರಾಫರ್ ಆಗಿರುವುದರ ಜೊತೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಜವಬ್ದಾರಿಗಳನ್ನು ನಿಭಾಯಿಸಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಪತ್ತೆಗಾಗಿ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಶೋಧ ಕಾರ್ಯ ನಡೆದಿದ್ದು, ಎಲ್ಲೆಡೆ ನಾಕಾಬಂಧಿ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು ಬಿ.ಸಿ.ರೋಡ್ ಮಧ್ಯೆ ಫರಂಗಿಪೇಟೆ ಇದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…