ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕುಕ್ಕುಜೆ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಕ್ವಾಲಿಸ್ ವಾಹನದ ಟಯರ್ ಸ್ಫೋಟಗೊಂಡು ವಾಹನ ಪಲ್ಟಿ ಹೊಡೆದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ರಾಕೇಶ್ ಮೃತಪಟ್ಟವರು. ಮೋಹನ್ ಕುಮಾರ್ ತೀವ್ರ ಗಾಯಗೊಂಡವರು.
ಕೋಲಾರದ ನರ್ಸಾಪುರದಿಂದ ತಿಲಕ್ ಎಂಬಾತ ಚಲಾಯಿಸುತ್ತಿದ್ದ ಕ್ವಾಲಿಸ್ ವಾಹನದಲ್ಲಿ ಹನುಮಂತ ಕೆ ಸ್ನೇಹಿತರಾದ ಅನಿಲ್, ಮೋಹನ್, ಹನುಮಂತ ಬಿ, ಗುರುರಾಜ್, ಉಮೇಶ್, ಸತೀಶ್ ಮತ್ತು ರಾಕೇಶ್ ಇದ್ದರು. ಬೀಚ್ ಗೆ ತೆರಳಿ ಬಳಿಕ ಧರ್ಮಸ್ಥಳಕ್ಕೆ ಹೋಗುವ ದಾರಿ ಮಧ್ಯೆ ಕಾರ್ಕಳ – ಬೆಳ್ತಂಗಡಿ ರಸ್ತೆಗೆ ಬಂದ ಸಂದರ್ಭ,ಸಂಜೆ ಕುಕ್ಕುಜೆ ಎಂಬಲ್ಲಿಗೆ ತಲುಪುವಾಗ ಕ್ಚಾಲಿಸ್ ವಾಹನದ ಎರಡು ಟಯರ್ ಗಳು ಸ್ಫೋಟಗೊಂಡು ಅಪಘಾತ ಸಂಭವಿಸಿದೆ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…