ಬಿ.ಸಿ.ರೋಡ್ : ಪ್ರವಾದಿ ಚರ್ಯೆಯನ್ನು ದಿನನಿತ್ಯ ರೂಢಿಗೊಳಿಸಿ ಜೀವನ ಪಾವನಗೊಳಿಸಬೇಕು ಎಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಮಿತ್ತಬೈಲು ಕೇಂದ್ರ ಮಸೀದಿ ಖತೀಬರಾದ ಅಶ್ರಫ್ ಫೈಝಿ ಕರೆ ನೀಡಿದರು.
ರಾಜ್ಯ ಫೈಝೀಸ್ ವತಿಯಿಂದ ರಾಜ್ಯಾದ್ಯಂತ ನಡಯುತ್ತಿರುವ ರಬೀಹ್ ಕ್ಯಾಂಪೈನ್-20 ರ ಅಂಗವಾಗಿ ಸಜಿಪ ಕೇಂದ್ರ ಮಸೀದಿಯಲ್ಲಿ ನಡೆದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದರು. ಅವರು ಪ್ರತಿಯೊಬ್ಬ ಮುಸಲ್ಮಾನನು ಪ್ರವಾದಿಯವರು ಕಲಿಸಿದ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದ ಮದ್ಯೆ ಶಾಂತಿ ಸಾಹೋದರತೆಯನ್ನು ಕಾಪಾಡುವುದು ಅನಿವಾರ್ಯವಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ಖತೀಬರಾದ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಮಾತನಾಡಿ ರಾಜ್ಯ ಫೈಝೀಸ್ ಹಮ್ಮಿಗೊಂಡ ಕಾರ್ಯಕ್ರಮ ಶ್ಲಾಘನೀಯವಾಗಿದ್ದು ಸಮೂಹದ ಸ್ಪಂದನ ಹಾಗೂ ಪ್ರೋತ್ಸಾಹ ಲಭಿಸುತ್ತಿದೆ. ಎಂದು ಅಭಿಪ್ರಾಯ ಪಟ್ಟರು. ಸಜಿಪ ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಲತೀಫ್ ಮುಸ್ಲಿಯಾರ್, ಎಸ್.ಕೆ.ಮುಹಮ್ಮದ್, ಆಸಿಫ್ ಕುನಿಲ್, ಕರೀಂ ಹಾಜಿ, ಹಂಝ ದಾರಿಮಿ, ಅಬೂಬಕ್ಕರ್ ಫೈಝಿ ಬೈಲುಗುತ್ತು ಮೊದಲಾದವರು ಉಪಸ್ಥಿತರಿದ್ದರು. ಸಜಿಪ ರೇಂಜ್ ಅಧ್ಯಕ್ಷರಾದ ಫಳುಲುದ್ದೀನ್ ಮುಸ್ಲಿಯಾರ್ ಸ್ವಾಗತಿಸಿ,ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…