ಬಂಟ್ವಾಳ: ಕಲ್ಲಡ್ಕ ಮತ್ತು ಸುತ್ತಮುತ್ತಲು ಮನೆಮಾತಾಗಿರುವ ಇಲೆಕ್ಟ್ರಾನಿಕ್ಸ್, ಫರ್ನೀಚರ್ಸ್ ಮತ್ತಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಸಂಭ್ರಮ ಎಲೆಕ್ಟ್ರಾನಿಕ್ಸ್ ತನ್ನ ಸೇವಾವ್ಯವಹಾರ ಚಟುವಟಿಕೆಯನ್ನು ಬಿ.ಸಿ.ರೋಡಿಗೆ ವಿಸ್ತರಿಸಿಕೊಂಡಿದ್ದು, ಬಿ.ಸಿ.ರೋಡಿನ ತಲಪಾಡಿಯಲ್ಲಿ ಎರಡನೇ ಶಾಖೆ ಆರಂಭಿಸಿದೆ. ಭಾನುವಾರ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಉದ್ಘಾಟಿಸಿದರು. ವಿಜಯದಶಮಿಯ ಪರ್ವಕಾಲದಲ್ಲಿ ಸಂಭ್ರಮ ಎಲೆಕ್ಟ್ರಾನಿಕ್ಸ್ ಆರಂಭಗೊಂಡಿರುವುದು ಸಂತಸದ ವಿಚಾರ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಮಾಲೀಕ ಗಿರೀಶ್ ನೆಟ್ಲ ಮಾತನಾಡಿ ನವೆಂಬರ್ 22ರವರೆಗೆ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟ, ಉಚಿತ ಉಡುಗೊರೆ ಹಾಗೂ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮೇಜರ್ ಅಪ್ಲೈಯನ್ಸಸ್ ವಿತರಕ ಶಶಿಧರ ಶೆಟ್ಟಿ, ಎಲ್.ಜಿ. ಇಲೆಕ್ಟ್ರಾನಿಕ್ಸ್ ನ ಮಂಗಳೂರು ಬ್ರಾಂಚ್ ಮ್ಯಾನೇಜರ್ ಅಶ್ವನಿ ಕುಮಾರ್ ಸಿ, ಬ್ಯಾಂಕ್ ಆಫ್ ಬರೋಡಾ ಕಲ್ಲಡ್ಕ ಶಾಖಾ ಪ್ರಬಂಧಕ ಪ್ರಣಮ್ ಮುಖ್ಯ ಅತಿಥಿಯಾಗಿ ಶುಭ ಕೋರಿದರು. ಸಂಸ್ಥೆಯ ಪ್ರವರ್ತಕರ ತಂದೆ, ತಾಯಿ ಬಾಬು ಮೂಲ್ಯ ಮತ್ತು ಭವಾನಿ ದಂಪತಿ, ಸಹೋದರ ಮೋಹನ್ ನೆಟ್ಲ ಉಪಸ್ಥಿತರಿದ್ದರು.