ಬಂಟ್ವಾಳ: ಭದ್ರಾ ಹೋಂ ಅಪ್ಲೈಯನ್ಸಸ್ ಮಳಿಗೆ ಬಂಟ್ವಾಳದ ಬಸ್ತಿಪಡ್ಪುವಿನ ಅಗ್ನಿಶಾಮಕ ಠಾಣೆ ಮುಂಭಾಗ ಭಾನುವಾರ ಶುಭಾರಂಭಗೊಂಡಿದೆ. ಕಳೆದ ಮೂವತ್ತೈದು ವರ್ಷಗಳಿಂದ ಗ್ಯಾಸ್ ಏಜೆನ್ಸಿ ಮೂಲಕ ಮನೆಮಾತಾಗಿರುವ ಭದ್ರಾ ಸಂಸ್ಥೆಯ ಗೃಹೋಪಯೋಗಿ ಮಾರಾಟ ವಸ್ತುಗಳ ಮಳಿಗೆ ಭದ್ರಾ ಹೋಂ ಅಪ್ಲೈನ್ಸಸ್ ನಲ್ಲಿ ಮನೆಯೊಂದಕ್ಕೆ ಬೇಕಾದ ಎಲ್ಲ ವಸ್ತುಗಳು ಒಂದೇ ಛಾವಣಿಯೊಳಗೆ ಖ್ಯಾತ ಕಂಪನಿಗಳ ಉತ್ಪನ್ನಗಳು ಆಕರ್ಷಕ ದರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದ್ದು, ವಿಶಾಲವಾದ ಪಾರ್ಕಿಂಗ್ ಹಾಗೂ ತಾವೇ ಆಯ್ಕೆ ಮಾಡಿಕೊಳ್ಳುವಂತೆ ವೈವಿಧ್ಯಮಯ ವಸ್ತುಗಳ ಆಯ್ಕೆ ಶೋರೂಂ ಇದಾಗಿದೆ. ಗೃಹಿಣಿಯೊಬ್ಬರಿಗೆ ದಿನಬಳಕೆಗೆ ಬೇಕಾದ ಎಲ್ಲ ವಸ್ತುಗಳು ಇಲ್ಲಿರುವುದು ವಿಶೇಷ.
ನೂತನ ಮಳಿಗೆಯನ್ನು ಎಸ್ಸಿಡಿಸಿಸಿ ಬ್ಯಾಂಕಿನ ನಿವೃತ್ತ ಆಡಳಿತ ನಿರ್ದೇಶಕ ನಾರಾಯಣ ಕಾಮತ್ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಬಂಟ್ವಾಳ ನಗರಕ್ಕೆ ಭದ್ರಾ ಅಪ್ಲೈಯನ್ಸಸ್ ಉತ್ತಮ ಕೊಡುಗೆಯಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರವರ್ತಕ ಮಂಜುನಾಥ ಆಚಾರ್ಯ ಸ್ವಾಗತಿಸಿ ಮಳಿಗೆಯಲ್ಲಿರುವ ವೈವಿಧ್ಯಗಳನ್ನು ವಿವರಿಸಿ ಗ್ರಾಹಕರ ಸಹಕಾರ ಕೋರಿದರು.
ಮಾಲಕಿ ಮೇಘಾ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಸಂಗಾತಿಯಾಗಿ, ಗೃಹಿಣಿಯರಿಗೆ ಗೃಹೋಪಯೋಗಿ ವಸ್ತುಗಳನ್ನು ಮಳಿಗೆಯಲ್ಲಿ ಪಡೆಯಬಹುದಾಗಿದೆ ಎಂದು ವಿವರಿಸಿ, ಸಹಕಾರ ಕೋರಿದರು.
ಈ ಸಂದರ್ಭ ಮಂಜುನಾಥ ಆಚಾರ್ಯ ಅವರ ತಂದೆ ಎಂ. ವರದ ಆಚಾರ್ಯ, ತಾಯಿ ಆಶಾಲತಾಬಾಯಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ, ಪ್ರಮುಖರಾದ ನೋಟರಿ ಮತ್ತು ನ್ಯಾಯವಾದಿ ಅಶ್ವನಿ ಕುಮಾರ್ ರೈ, ವಿದ್ಯಾ ರೈ, ನಾರಾಯಣ ಪೈ, ಮುಕ್ತಾ ಪೈ, ಸಂಜೀವ ಪೂಜಾರಿ ಗುರುಕೃಪಾ, ಬಸ್ತಿ ಮಾಧವ ಶೆಣೈ, ಬೇಬಿ ಕುಂದರ್, ಡಾ.ಅಶ್ವಿನ್ ನಾಯಕ್ ಸುಜೀರ್, ಡಾ. ಸಂತೋಷ್ ಪೈ, ಬಂಟ್ವಾಳ ಸಿಡಿಪಿಒ ಗಾಯತ್ರಿ ಕಂಬಳಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಪತ್ರಕರ್ತ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.