ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಶ್ರೀ ಗಣಪತಿ ದೇವರ ಗರ್ಭಗುಡಿ ಹಾಗೂ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುತ್ತುಗೋಪುರಕ್ಕೆ ಶಿಲಾನ್ಯಾಸವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕೆ. ಪ್ರಭಾಕರ ಭಟ್ ನೆರವೇರಿಸಿದರು.
ಧಾರ್ಮಿಕ ವಿಧಿ-ವಿಧಾನಗಳನ್ನು ಸಜಿಪ ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು. ಪ್ರಮುಖರಾದ ಮುಳ್ಳುಂಜ ವೆಂಕಟೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ವಾಸ್ತುಶಾಸ್ತ್ರಜ್ಞ ಪ್ರಸಾದ್ ಮುನಿಯಂಗಳ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾ ಸ್ರಿತ್ತಾಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸಜೀಪಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಮಾಜಿ ಮೊಕ್ತೇಸರ ಶಿವರಾಮ ಭಂಡಾರಿ, ಉದ್ಯಮಿ ಗಣೇಶ್. ಪ್ರಮುಖರಾದ ಯಶವಂತ ದೇರಾಜೆ, ಕೆ.ಟಿ. ಸುಧಾಕರ್, ನಮಿತಾ ಕರ್ಕೇರ. ಪ್ರವೀಣ್ ಆಳ್ವ, ರಾಮಕೃಷ್ಣ ಭಟ್, ವಸಂತ್ ಪೆರಾಜೆ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…