ವಿಟ್ಲ

ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಸರಕಾರದ ಯೋಜನೆಗಳು ಸಮರ್ಪಕವಾಗಿ ಬಳಕೆಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ, ಆ ನಿಟ್ಟಿನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗಾಗಿ ಅನುದಾನದ ಜೊತೆ ಉತ್ತಮ ಯೋಜನೆಗಳನ್ನು ಜಾರಿಮಾಡುತ್ತಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲಪಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 27 ಕೋಟಿಗೂ ಮಿಕ್ಕಿದ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಶಂಕುಸ್ಥಾಪನೆ ಹಾಗೂ ಕಾಮಗಾರಿಗಳ ವೀಕ್ಷಣೆ ನಡೆಸಿ ಬಳಿಕ ಮಾತನಾಡಿದರು.
ಗ್ರಾಮದ ಅಭಿವೃದ್ಧಿಯೇ ಮುಖ್ಯಮಂತ್ರಿಯವರ ಮೂಲ ಧ್ಯೇಯ ವಾಕ್ಯವಾಗಿದ್ದು ನಾವು ಅವರ ಯೋಜನೆಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ‌ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವಿಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷ ಜಯರಾಮ್ ನಾಯ್ಕ್ ಕುಂಟ್ರಕಲ, ಪ್ರಮುಖರಾದ ರಾಜಾರಾಮ್ ಭಟ್ ಬಲಿಪಗುಳಿ, ರೇಶ್ಮಾ ಶಂಕರಿ, ಸತೀಶ್ ಭಟ್, ಮುರಳಿ ಭಟ್, ಸುಂದರ ಶೆಟ್ಟಿ, ನಾಗೇಶ್ ಶೆಟ್ಟಿ, ಅಭಿಷೇಕ್ ರೈ, ಅರವಿಂದ ರೈ, ವಿಶ್ವನಾಥ ಅಡಪ, ನಾರಾಯಣ ಪೂಜಾರಿ, ನಾಗೇಶ್ ಗೌಡ ಬಣ, ಲೋಕಪ್ಪ ಗೌಡ ಬಣ, ಪ್ರೇಮಲತಾ, ಮಜಿ ರಾಮ್ ಭಟ್, ದಿವಾಣ ಶಂಕರ ಭಟ್, ಶಿವರಾಂ ನಾಯ್ಕ ದಿವಾಣ, ಸೀತಾರಾಮ ಗೌಡ, ಆನಂತ್ ಭಟ್, ಮಾಧವ ರೈ, ಬಾಲಕೃಷ್ಣ ರೈ, ಶಿವಪ್ರಸಾದ್ ಶೆಟ್ಟಿ ಅನೆಯಾಲ,ವಿಠಲ್ ಶೆಟ್ಟಿ ಅಗರಿ, ಲೋಹಿತ್ ಕೆಳಗಿನ ಅಗರಿ, ನಾರಾಯಣ ಶೆಟ್ಟಿ ಕುಲ್ಯಾರ್, ರಾಜಾರಾಮ್ ಹೆಗ್ಡೆ, ವಿಶ್ವನಾಥ್ ಪೂಜಾರಿ ಕಟ್ಟತ್ತಿಲಕೋಡಿ, ಬಾಲಕೃಷ್ಣ ಸೆರ್ಕಳ, ಪ್ರಶಾಂತ್ ಕುಮಾರ್ ಶೆಟ್ಟಿ ಅಗರಿ, ಸತೀಶ್ ನಾಯ್ಕ್ ಮಂಕುಡೆ, ವೇಣುಗೋಪಾಲ್ ಆಚಾರಿ ಮಂಕುಡೆ, ಹರೀಶ್ ಟೈಲರ್ ಮಂಕುಡೆ,
ದೇವಿದಾಸ್ ಶೆಟ್ಟಿ ಪಾಲ್ತಾಜೆ, ವಿದ್ಯೆಶ್ ರೈ, ರಾಮ ನಾಯ್ಕ್ ಕುಕ್ಕಿನಾರು, ಚಂದ್ರಾವತಿ ಮೇಗಿನಮಲಾರು, ಶಂಕರ್ ಶೆಟ್ಟಿಗಾರ್, ರಾಮಕೃಷ್ಣ ಚೌಟ, ಆನಂದ ಪೂಜಾರಿ, ನಾಗರಾಜ್ ಆಳ್ವ ಶಶಿಧರ್ ರೈ ಕುಳಾಲು, ಚಿನ್ನಪ್ಪ ಗೌಡ ಬಂಡಮುಗೇರು, ಹರೀಶ್ ಶೆಟ್ಟಿ ಕೊಡಂಗೆ, ಸುಧಾಕರ್ ಪೂಜಾರಿ ಕೋಡಿ, ಹರೀಶ್ ಕಾಡುಮಠ, ಗಿರಿಧರ್ ಶೆಟ್ಟಿ, ಶರತ್, ಅಮರೇಶ್ ಶೆಟ್ಟಿ, ಗಣೇಶ್ ಬಾರೆಬೆಟ್ಟು, ಸುಜಿತ್ ಪೂಜಾರಿ ಕುದ್ರಿಯ, ನಟೇಶ್ ಬೊಳ್ಳೆಚ್ಚರ್ ಮತ್ತಿತರರು ಉಪಸ್ಥಿತರಿದ್ದರು.

ಕೊಳ್ನಾಡು ಗ್ರಾಮ:
1. ಬೊಳ್ಳೆಚ್ಚಾರು ರಸ್ತೆ ಅಭಿವೃದ್ಧಿ – 5ಲಕ್ಷ
2. ಮಂಕುಡೆ – ಪರ್ತಿಪ್ಪಾಡಿ – ಕೆಮರಡ್ಕ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿ – 7ಲಕ್ಷ
3. ಮಂಕುಡೆ ವಿಷ್ಣುಮೂರ್ತಿ
ದೇವಸ್ಥಾನ ರಸ್ತೆ ಅಭಿವೃದ್ಧಿ – 5ಲಕ್ಷ
4. ಕುಂಟ್ರಕಲ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ – 10.52ಲಕ್ಷ
5. ಕುಂಟ್ರಕಲ ವಿದ್ಯುತ್ ಪರಿವರ್ತಕ
6. ಸೆರ್ಕಳ – ಪೀಲ್ಯಡ್ಕ ರಸ್ತೆ ಅಭಿವೃದ್ಧಿ – 5ಲಕ್ಷ
7. ಸಾಲೆತ್ತೂರು – ಪೀಲ್ಯಡ್ಕ – ಮಂಚಿ ರಸ್ತೆ ಅಭಿವೃದ್ಧಿ – 5ಲಕ್ಷ
8. ಕಾಡುಮಠ – ಕಡೆಪಿಕೇರಿ ರಸ್ತೆ ಅಭಿವೃದ್ಧಿ – 10ಲಕ್ಷ
9. ಪೆರ್ಲದಬೈಲು – ಬರ್ಕಳ ಮಾರಿಗುಡಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ – 15ಲಕ್ಷ
10. ಸಾಲೆತ್ತೂರು – ತಾಮರಾಜೆ ದೈವಸ್ಥಾನ ರಸ್ತೆ ಅಭಿವೃದ್ಧಿ – 5ಲಕ್ಷ
11. ಸಾಲೆತ್ತೂರು ಸದಾಶಿವ ದೇವಸ್ಥಾನ ರಸ್ತೆ ಅಭಿವೃದ್ಧಿ – 20ಲಕ್ಷ
12. ಕಟ್ಟತ್ತಿಲ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ – 5ಲಕ್ಷ
13. ಕಟ್ಟತ್ತಿಲ ಮಠ ರಸ್ತೆ ಅಭಿವೃದ್ಧಿ – 25ಲಕ್ಷ
14. ಕಟ್ಟತ್ತಿಲಕೋಡಿ – ನಂದ್ರಬೈಲು ರಸ್ತೆ ಅಭಿವೃದ್ಧಿ – 20ಲಕ್ಷ
15. ಕೋಕಳ – ಭಂಡಾರದಮನೆ ರಸ್ತೆ ಅಭಿವೃದ್ಧಿ – 5ಲಕ್ಷ
16. ಕುಡ್ತಮುಗೇರು – ಪಾದೇರಪಡ್ಪು -ಕುದ್ರಿಯ ರಸ್ತೆ ಅಭಿವೃದ್ಧಿ – 10ಲಕ್ಷ
17. ಕೊಡಂಗೆ – ಕುದ್ರಿಯ ರಸ್ತೆ ಅಭಿವೃದ್ದಿ – 5ಲಕ್ಷ
18. ಚೌಕ ಮಲರಾಯ ದೈವಸ್ಥಾನ ರಸ್ತೆ ಅಭಿವೃದ್ಧಿ – 10ಲಕ್ಷ
19. ಸೆರ್ಕಳ – ಪೀಲ್ಯಡ್ಕ – ಸಾಗು ರಸ್ತೆ ಅಭಿವೃದ್ಧಿ – 10ಲಕ್ಷ
ಸಾಲೆತ್ತೂರು ಗ್ರಾಮ:
20. ಬೊಲ್ಮಾರು ಶಾಲಾ ಬಳಿಯಿಂದ ಉಳಿಯತ್ತಡ್ಕ ಅಣೆಕಟ್ಟು ರಸ್ತೆ ಅಭಿವೃದ್ಧಿ – 20ಲಕ್ಷ
21. ಕಿಲ್ಲಂಬಲೆಪಡ್ಪು ರಸ್ತೆ ಅಭಿವೃದ್ಧಿ – 10ಲಕ್ಷ
22. ಬೊಲ್ಮಾರು ಮಸೀದಿ ಬಳಿ ರಸ್ತೆ ಅಭಿವೃದ್ಧಿ – 4ಲಕ್ಷ
23. ಉಳಿಯತ್ತಡ್ಕ ಕಿಂಡಿ ಅಣೆಕಟ್ಟು ಅಭಿವೃದ್ಧಿ – 45ಲಕ್ಷ
24. ಬೊಲ್ಮಾರು ಸ.ಹಿ.ಪ್ರಾ.ಶಾಲಾ ಕಟ್ಟಡ ದುರಸ್ತಿ – 5ಲಕ್ಷ
25. ಬ್ರಹ್ಮ ಶ್ರೀ ಗುರು ನಾರಾಯಣ ಮಂದಿರ ರಸ್ತೆ ಅಭಿವೃದ್ಧಿ – 7ಲಕ್ಷ
ವಿಟ್ಲ ಪಡ್ನೂರು ಗ್ರಾಮ:
26. ಕೋಡಪದವು ದಿವಾಣ ಮಜಿ ರಸ್ತೆ ಕಾಂಕ್ರೀಟಿಕರಣ – 25ಲಕ್ಷ
27. ಎರ್ಮನಿಲೆ ಎಂಬಲ್ಲಿ ಕಿಂಡಿ ಅಣೆಕಟ್ಟು ಶಿಲಾನ್ಯಾಸ – 2ಕೋಟಿ ಸೇರಿದಂತೆ ಒಟ್ಟು 6.25 ಕೋಟಿ ಅನುದಾನ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts