ಬಂಟ್ವಾಳ: ಸೆಲ್ಕೋ ಫೌಂಡೇಶನ್ ಮಣಿಪಾಲ ಮತ್ತು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿಸಿ ಟ್ರಸ್ಟ್ (ರಿ) ಬಂಟ್ವಾಳ, ಸಿದ್ಧಕಟ್ಟೆ ವಲಯ ವತಿಯಿಂದ ಸೋಲಾರ್ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ವಿಶೇಷ ವಾಗಿ ಹೈನುಗಾರ ರಿಗೇ ಮಾಹಿತಿ, ಮಾರ್ಗ ದರ್ಶನ ಕಾರ್ಯಕ್ರಮವು ಹಾಲು ಉತ್ಪಾದಕರ ಸಹಕಾರ ಸಂಘ ದ ಸಭಾಭವನ ವಾಮದಪದವು ಇಲ್ಲಿ ಗೋಪಾಲಕೃಷ್ಣ ಚೌಟ ಅಧ್ಯಕ್ಷತೆಯಲ್ಲಿ ಜರಗಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ ಅವರು ಉದ್ಘಾಟಿಸಿದರು. ಸಲ್ಕೋ ಫೌಂಡೇಶನ್ ವ್ಯವಸ್ಥಾಪಕ ಕಿಶೋರ್ ಅಜೆಕಾರು ಮತ್ತು ಕ್ಷೀರ ಎಂಟರ್ಪ್ರೈಸಸ್ ಮುಖ್ಯಸ್ಥ ಚಂದ್ರಶೇಖರ್ ಅವರು ಸೌರ ಶಕ್ತಿ ಚಾಲಿತ ಹಾಲು ಹಿಂಡುವ ಯಂತ್ರದ ಪ್ರಾತ್ಯಕ್ಷಿಕೆ – ಮಾಹಿತಿ ನೀಡಿದರು.
ಸಿದ್ಧಕಟ್ಟೆ ವಲಯ ಜನಜಾಗೃತಿ ವೇದಿಕೆ ಅದ್ಯಕ್ಷ ಉದ್ಯಮಿ ಶ್ರೀಧರ ಪೈ, ತಾಲೂಕು ಜನಜಾಗೃತಿ ಸದಸ್ಯ ನವೀನ್ ಚಂದ್ರ ಶೆಟ್ಟಿ, ತಾಲೂಕು ಕೃಷಿ ಅಧಿಕಾರಿ ಜನಾರ್ಧನ್, ಸಿದ್ಧಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಉಪಸ್ಥಿತರಿದ್ದರು. ಸೆಲ್ಕೊ ಸಂಸ್ಥೆಯ ರವೀನಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮಾಧವ ಸ್ವಾಗತಿಸಿ, ತಾರಾನಾಥ್ ವಂದಿಸಿದರು.