ಬಂಟ್ವಾಳ

ಪ್ರಕೃತಿಯನ್ನು ಹತ್ತಿಕ್ಕಲು ಮಾನವ ಹೊರಟರೆ ಏನಾಗುತ್ತದೆ? ಓದಿರಿ ‘ತಿರುಗುಬಾಣ’

  • ಬಿ.ಸಿ.ರೋಡಿನಲ್ಲಿ ಅನಾವರಣಗೊಂಡಿತು ಪ್ರೊ.ರಾಜಮಣಿ ರಾಮಕುಂಜ ಅವರ ಕೃತಿ

ವಿಡಿಯೋ ಲಿಂಕ್ ಇಲ್ಲಿದೆ: 

ಬಂಟ್ವಾಳ: ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಬಂಟ್ವಾಳ, ಆಶ್ರಯದಲ್ಲಿ ಪರಿಸರವಾದಿ ಪ್ರೊ. ರಾಜಮಣಿ ರಾಮಕುಂಜ ಬರೆದ ಮೊಡಂಕಾಪು ಸರಿದಂತರ ಪ್ರಕಾಶನ ಪ್ರಕಟಿತ ತಿರುಗುಬಾಣ ಎಂಬ ಕೃತಿಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಭಾನುವಾರ ಸಂಜೆ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ಕೊರೊನಾ ಬಂದ ಬಳಿಕ ಜಗತ್ತು ಭಾರತೀಯ ಚಿಂತನೆಗಳತ್ತ ನೋಡುವ ಕಾಲ ಬಂದಿದೆ. ಮನುಷ್ಯ ಪ್ರಕೃತಿಯೊಂದಿಗಿನ ಸಂಬಂಧಗಳ ಅನಾವರಣವನ್ನು ಪ್ರೊ. ರಾಜಮಣಿ ರಾಮಕುಂಜ ಅವರು ಮಾಡಿದ್ದು, ಪ್ರಕೃತಿ, ಪರಿಸರಕ್ಕೆ ವಿರುದ್ಧವಾಗಿ ನಾವು ನಡೆದರೆ ಹೇಗೆ ತಿರುಗುಬಾಣವಾಗುತ್ತದೆ ಎಂಬುದನ್ನು ಅವರು ಮಾರ್ಮಿಕವಾಗಿ ವಿವರಿಸಿದ್ದಾರೆ  ಲಾಕ್ ಡೌನ್ ಅವಧಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಮ್ಮ ಬಾಲ್ಯದ ನೆನಪುಗಳನ್ನು ಕೊರೊನಾ ಸಂದರ್ಭಕ್ಕೆ ಅನ್ವಯಿಸಿ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲ ದೃಷ್ಟಿಯಿಂದ ವಿಶ್ಲೇಷಿಸುವ ರಾಜಮಣಿಯವರು, ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯನ್ನು ವಿವರಿಸುತ್ತಾರೆ. ಸ್ವಾವಲಂಬಿ ಬದುಕು ಮಾತ್ರ ಭಾರತವನ್ನು ದೃಢಗೊಳಿಸಬಲ್ಲದು ಎನ್ನುವುದನ್ನು ತಿಳಿಸಿ, ಭಾರತದ ಸತ್ವಯುತ ಮಣ್ಣಿನ ಗುಣವನ್ನು ಸೆರೆಹಿಡಿದಿದ್ದಾರೆ ಎಂದು ಡಾ. ಭಟ್ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಿರೀಶ ಭಟ್ ಅಜಕ್ಕಳ ಮಾತನಾಡಿ, ಮನುಷ್ಯ ತಾನೇ ಶ್ರೇಷ್ಠ, ಪ್ರಾಣಿ ಪಕ್ಷಿಗಳ ಸಹಿತ ಉಳಿದವೆಲ್ಲ ತನ್ನ ಅಡಿಯಾಳುಗಳು ಎಂಬ ಚಿಂತನೆಯನ್ನು ಕಳಚಿಕೊಳ್ಳುವ ಕಾಲ ಇಂದು ಬಂದಿದ್ದು, ಪ್ರೊ.ರಾಜಮಣಿ ಅವರ ಬರೆಹಗಳಲ್ಲಿ ಇವು ಕಾಣಿಸುತ್ತದೆ ಎಂದರು.

ಪುಸ್ತಕದ ಕುರಿತು ಮಾತನಾಡಿದ ಕೃತಿಕಾರ ಪ್ರೊ.ರಾಜಮಣಿ ರಾಮಕುಂಜ, ಲಾಕ್ ಡೌನ್ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಈ ಲೇಖನಗಳು ವರ್ತಮಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೊಂಡಿವೆ ಎಂದರು.

ಮುಖ್ಯ ಅತಿಥಿ ಮಂಗ್ಲಿಮಾರ್ ಅಣ್ಣಪ್ಪ ಸ್ವಾಮಿ ಜುಮಾದಿ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆ ಶುಭ ಹಾರೈಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಕೆ.ಮೋಹನ ರಾವ್, ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಬಂಟ್ವಾಳ ಅಧ್ಯಕ್ಷ ಬಿ.ಸುದರ್ಶನ ಜೈನ್ ಉಪಸ್ಥಿತರಿದ್ದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ಪತ್ರಕರ್ತ ಗೋಪಾಲ ಅಂಚನ್ ಆಲದಪದವು ವಂದಿಸಿದರು. ಸೂರ್ಯನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts