ಬಂಟ್ವಾಳ: ಬಂಟ್ವಾಳ ತಾಲೂಕಿನ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ 18ರಿಂದ 45 ವರ್ಷದೊಳಗಿನ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣ, ಅನುತ್ತೀರ್ಣರಾದ ವಿಕಲಚೇತನ (ಅಂಗವಿಕಲ)ರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ನೇಮಕ ಮಾಡಲು ಅವಕಾಶವಿದ್ದು, ಮಾಸಿಕ 6 ಸಾವಿರ ರೂ ಗೌರವಧನವನ್ನು ನೀಡಲಾಗುತ್ತಿದೆ. ಗೋಳ್ತಮಜಲು, ಕರಿಯಂಗಳ, ಕಳ್ಳಿಗೆ, ಅಮ್ಮುಂಜೆ, ನರಿಕೊಂಬು, ಇರ್ವತ್ತೂರು, ಸಜೀಪಮುನ್ನೂರು, ಬಾಳ್ತಿಲ, ನಾವೂರು, ಸಜೀಪನಡು, ಸಜೀಪಪಡು, ಮೇರಮಜಲು, ಪಂಜಿಕಲ್ಲು, ಬಡಗಬೆಳ್ಳೂರು ಗ್ರಾಪಂಗಳಲ್ಲಿ ಹುದ್ದೆ ಖಾಲಿ ಇದ್ದು, ಆಸಕ್ತ ವಿಕಲಚೇತನರು ನವೆಂಬರ್ 7ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಬಂಟ್ವಾಳ, ಕೈಕುಂಜೆ, ಬಿ.ಸಿ.ರೋಡ್ ಇಲ್ಲಿ ಅರ್ಜಿ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.