ಬಂಟ್ವಾಳ: ಶ್ರೀ ಕ್ಷೇತ್ರ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಬಿ.ಸಿ ಟ್ರಸ್ಟ್(ರಿ) ಬಂಟ್ವಾಳ, ಪಾಣೆಮಂಗಳೂರು ವಲಯ ಮತ್ತು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಬಂಟ್ವಾಳ ಆಶ್ರಯದಲ್ಲಿ ಕೊರೋನ ವೈರಸ್ ಮತ್ತು ಡ್ರಗ್ಸ್ ಹಾವಳಿ ಬಗ್ಗೆ ನಾಗರಿಕರಲ್ಲಿ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ದಾವಣಗೆರೆ ತಂಡದವರಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು.
ಧ್ಯಕ್ಷತೆಯನ್ನು ಸಜೀಪ ಮೂಡ ಗ್ರಾ.ಪ. ಅಧ್ಯಕ್ಷ ವಿಶ್ವನಾಥ ಬೆಲ್ಚಡ ವಹಿಸಿದ್ದರು. ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಎ. ಸಿ. ಭಂಡಾರಿ ಉದ್ಘಾಟಿಸಿ ಕೊರೋನ ವಿಪತ್ತು ಮತ್ತು ಮಾದಕ ವ್ಯಸನ ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿನಾಟಕ ಗಳಂತಹ ಕಾರ್ಯಕ್ರಮಗಳನ್ನು ಯೋಜನೆಯ ಮೂಲಕ ಹಮ್ಮಿ ಕೊಂಡಿರುವುದು ಡಾ. ಹೆಗ್ಗಡೆ ಅವರ ಸಾಮಾಜಿಕ ಕಳಕಳಿಯ ಪ್ರತೀಕ ಎಂದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಬಂಟ್ವಾಳ ನಗರ ಠಾಣಾ ಸಿಬ್ಬಂದಿ ನಾಗರಾಜ್ ಮಂಗಳೂರು, ಬಂಟ್ವಾಳ ವಲಯ ಅಧ್ಯಕ್ಷ ವಸಂತ, ಸಜೀಪ ಮೂಡ ಒಕ್ಕೂಟ ಅಧ್ಯಕ್ಷ ಚಂದ್ರಹಾಸ್ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಅಮಿತಾ ನಿರೂಪಿಸಿ ವಂದಿಸಿದರು.