ಬಂಟ್ವಾಳ: ಕಳೆದ ಮೂರು ದಿನಗಳಿಂದ ತೀವ್ರವಾಗಿ ಸುರಿಯುತ್ತಿದ್ದ ಮಳೆ ಗುರುವಾರ ಕಡಿಮೆಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಬೆಳಗಿನ ಜಾವ ಮಳೆ ಸುರಿದಿದ್ದರೂ ಸಂಜೆ ವೇಳೆ ಬಿಡುವು ಪಡೆಯಿತು. ಕಂದಾಯ ಇಲಾಖೆ ಮಾಹಿತಿ ಪ್ರಕಾರ ಒಟ್ಟು ಎರಡು ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ.
ಗುರುವಾರ ಬೆಳಗ್ಗೆ ವೀರಕಂಬ ಗ್ರಾಮದ ಬೊಣ್ಯಕುಕ್ಕು ಎಂಬಲ್ಲಿ ಶ್ರೀಧರ್ ಬೆಲ್ಚಾಡ ಅವರ ವಾಸದ ಮನೆ ಮಳೆಯಿಂದ ಸಂಪೂರ್ಣ ಕುಸಿದು ಬಿದ್ದಿದೆ. ಯಾವುದೇ ಪ್ರಾಣಾಪಾಯ ಆಗಿರುವುದಿಲ್ಲ. ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿನ ಪಿ.ರಾಮಚಂದ್ರ ಅವರ ಮನೆಯ ಮಾಡು ಕುಸಿದು ತೀವ್ರ ಹಾನಿ ಆಗಿರುವ ಕುರಿತು ವರದಿಯಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…