ಬಂಟ್ವಾಳ: ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವ್ಯಾಪಕ ಹಾನಿಗಳಾಗಿದೆ. ಕೆದಿಲ ಗ್ರಾಮದ ಕೃಷ್ಣಮೂರ್ತಿ ಎಂಬವರ 1 ಎಕ್ರೆ ತೋಟ ಜಲಾವೃತಗೊಂಡರೆ, ಸೇಸಪ್ಪ ಮೂಲ್ಯ ಅವರ ಭತ್ತದ ಗದ್ದೆ ನೀರು ತುಂಬಿ ಹಾನಿಯಾಗಿದೆ. ಅಬ್ಬೆಟ್ಟು ಬಳಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆ ಉಮಟಾದರೆ, ಬಾಳ್ತಿಲ ಗ್ರಾಮದ ಸಣ್ಣಕುಕ್ಕುವಿನಲ್ಲಿ ವನಜಾಕ್ಷಿ ಎಂಬವರ ಮನೆ ಗೋಡೆ ಕುಸಿದ ಹಿನ್ನೆಲೆಯಲ್ಲಿ ಮನೆಯವರನ್ನು ಸ್ಥಳಾಂತರಿಸಲಾಯಿತು. ಸಜೀಪಮುನ್ನೂರು ಗ್ರಾಮದ ಅಶ್ರಫ್, ಮೇರಮಜಲು ಗ್ರಾಮದ ಹೂವಯ್ಯ ಪೂಜಾರಿ. ಮೇರಮಜಲು ಗ್ರಾಮದ ತೇವುಕಾಡುನಲ್ಲಿ ಹರಿಶ್ಚಂದ್ರ ಅವರ ಮನೆ ಹಾಗೂ ಮನೆಯ ಸಮೀಪ ಹಾನಿಯಾಗಿವೆ. ನೇತ್ರಾವತಿ ನದಿ 6.2 ಮೀಟರ್ ಎತ್ತರಕ್ಕೆ ಹರಿಯುತ್ತಿದ್ದು ಅಪಾಯದ ಮಟ್ಟ 8.5 ಮೀಟರ್ ಆಗಿದೆ.