ಬಂಟ್ವಾಳ: ತಾಲೂಕಿನ ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬೇಡಿಕೆ ಇದ್ದು, ಕಳೆದ ಎರಡು ವರ್ಷದ ಅವಽಯಲ್ಲಿ ಹಂತ ಹಂತವಾಗಿ ಸುಮಾರು ೫ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.
ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೇತುವೆ ಸಹಿತ ಒಟ್ಟು 3 ಕೋ.ರೂ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಲಾನ್ಯಾಸ: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅನುದಾನದಲ್ಲಿ ಜಿಲ್ಲಾ ಮುಖ್ಯ ರಸ್ತೆ, ಸೇತುವೆಗಳು ಯೋಜನೆಯಲ್ಲಿ 1.25 ಕೋ. ರೂ.ವೆಚ್ಚದಲ್ಲಿ ಮಣಿನಾಲ್ಕೂರು-ಕಕ್ಯಪದವು ಸಂಪರ್ಕದ ಜೇಡರಬೆಟ್ಟುವಿನಲ್ಲಿ ಸೇತುವೆ ನಿರ್ಮಾಣ,೩೦ ಲಕ್ಷ ರೂ. ವೆಚ್ಚದ ಕೊಡಂಗೆ-ಅಗಲ ರಸ್ತೆ, ೨೦ ಲಕ್ಷ ರೂ. ವೆಚ್ಚದ ಕಂರ್ಬಡ್ಕ ಕಿರು ಸೇತುವೆ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಉದ್ಘಾಟನೆ: ೫ ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ತೆಕ್ಕಿದಗುರಿ-ಮಾದೋಡಿ ಕಾಂಕ್ರೀಟ್ ರಸ್ತೆ, ೧೫ ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮಚ್ಚಿಗುಡ್ಡೆ-ಬೋಳ್ಯ ಕಾಂಕ್ರೀಟ್ ರಸ್ತೆ, ೬ ಲಕ್ಷ ರೂ. ವೆಚ್ಚದ ಜಾರಿಗೆದಡಿ-ಅನೆತ್ಯಾರ್ ರಸ್ತೆ,೧೦ ಲಕ್ಷ ರೂ. ವೆಚ್ಚದ ಗುಡ್ಡೆ ಮೇಲು ರಸ್ತೆ, ೫ಲಕ್ಷ ರೂ. ವೆಚ್ಚದ ಕಕ್ಯಪದವು ಅನೆತ್ಯಾರು ರಸ್ತೆ, ೧೦ ಲಕ್ಷ ರೂ.ವೆಚ್ಚದ ನೀರಾಜೆ-ಕಕ್ಯಪದವು ರಸ್ತೆ, ೧೦ ಲಕ್ಷ ರೂ. ವೆಚ್ಚದ ಕಕ್ಯ-ಭಂಡಾರದಮನೆ ರಸ್ತೆ ಹಾಗೂ ಇತರ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಂಜಿತ್ ಮೈರ, ಉಳಿ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಸುರೇಶ್ ಮೈರ, ಪ್ರಮುಖರಾದ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಧನಂಜಯ ಶೆಟ್ಟಿ ಎನ್., ಚಿದಾನಂದ ರೈ, ಚೇತನ್ ಹೂರ್ದೊಟ್ಟು, ರೇವತಿ ಮುದಲಾಡಿ, ವಸಂತ ಸಾಲ್ಯಾನ್ ರಾಮನಗರ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಪದ್ಮನಾಭ ರೈ ಮಜಿಗುಡ್ಡೆ, ರವಿ ಶೆಟ್ಟಿ ಬೋಳ್ಯ, ಜಿನ್ನಪ್ಪ ಗೌಡ ಕೊಡಂಗೆ,ಯಶವಂತ ಆನಂದಮಜಲು, ಶಿವಾನಂದ ಗೌಡ ಕಜೆಕೋಡಿ, ರೋಹಿನಾಥ ಕಕ್ಯಪದವು, ಸುರೇಂದ್ರ, ಮೋನಪ್ಪ ಪೂಜಾರಿ, ಖಾಸಿಂ ಬನತ್ತಪಲ್ಕೆ, ಚಂದ್ರ ಪೂಜಾರಿ, ಜಯ ಶೆಟ್ಟಿ ಕಿಂಜಾಲು, ನೋಣಯ್ಯ ಪೂಜಾರಿ, ಗುತ್ತಿಗೆದಾರ ಧೀರಜ್ ನಾಯ್ಕ್, ಅಭಿಯಂತರ ಅಮೃತ್ ಕುಮಾರ್ ಮತ್ತಿತರರಿದ್ದರು.