ಉಳ್ಳಾಲ: ಮಂಗಳೂರು ತಾ.ನ ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರೀ ಮಹಿಳಾ ಮಂಡಲದ ಮಹಾಸಭೆಯು ಶ್ರೀಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿ ಅ.11 ರಂದು ನಡೆಯಿತು. ಶ್ರೀಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್ ಅವರು ಸಸಿಗೆ ನೀರು ಸುರಿಯುವ ಮೂಲಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸದಸ್ಯರು ಪರಸ್ಪರ ಒಗ್ಗಟಿನಿಂದ ಸಂಘಶಕ್ತಿಯ ಮೂಲಕ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಸಂಘದ ಉಪಾಧ್ಯಕ್ಷೆ ಹರಿಣಾಕ್ಷಿ ಭಂಡಾರಬೈಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ,ಮಾಜಿ ಕಾರ್ಯದರ್ಶಿ ಕೋಡಿ ಜಯ ನಾಯಕ್, ಶ್ರೀ ಸೋಮೇಶ್ವರೀ ಸೌ.ಸ.ಸಂಘದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ,ಉಪಾಧ್ಯಕ್ಷೆ ಡಾ. ಧನಲಕ್ಷ್ಮೀ ಎಂ.ನಾಯಕ್ ಅವರು ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಇದೇ ವೇಳೆ ಮಹಿಳಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಪದಾಧಿಕಾರಿಗಳು: ನೂತನ ಅಧ್ಯಕ್ಷೆಯಾಗಿ ಶಾರದಾ ಮೋಹನ್ ಅಸೈಗೋಳಿ ಆಯ್ಕೆಗೊಂಡರು. ಉಳಿದಂತೆ ಪದಾಧಿಕಾರಿಗಳಾಗಿ ಹರಿಣಾಕ್ಷಿ (ಉಪಾಧ್ಯಕ್ಷೆ), ಮೋಹಿನಿ ಶೆಟ್ಟಿಬೊಟ್ಟು( ಕಾರ್ಯದರ್ಶಿ), ವೇದಾವತಿ (ಜತೆ ಕಾರ್ಯದರ್ಶಿ ),ಉಮಾವತಿ ( ಕೋಶಾಧಿಕಾರಿ) ಅವರು ಆಯ್ಕೆಯಾದರು.ಹಾಗೂ ಏಳುಮಂದಿ ಸದಸ್ಯೆಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಮಾಜಿ ಅಧ್ಯಕ್ಷೆಯರಾದ ಹೇಮ ಮಂಕಿಸ್ಟ್ಯಾಂಡ್ , ಕಸ್ತೂರಿ ಆರ್ ನಾಯಕ್, ಹಿರಿಯ ಸದಸ್ಯೆ ರೋಹಿಣಿ ಬಬ್ಬುಕಟ್ಟೆ ಅವರು ಉಪಸ್ಥಿತರಿದ್ದರು, ಕಾರ್ಯದರ್ಶಿ ಮೋಹಿನಿ ಶೆಟ್ಟಿಬೊಟ್ಟು ಸ್ವಾಗತಿಸಿ,ಗತವರ್ಷದ ವರದಿವಾಚಿಸಿದರು.ಮಾಜಿ ಕೋಶಾಧಿಕಾರಿ ನಳಿನಿ ಶಿವಾನಂದ ನಾಯಕ್ ಲೆಕ್ಕಪತ್ರ ಮಂಡಿಸಿದರು.ಮಾಜಿ ಕಾರ್ಯದರ್ಶಿ ರೇಣುಕಾ ಕಲ್ಲಾಪು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.