ಬಂಟ್ವಾಳ: ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಅನಂತಕೃಷ್ಣ ಅವರಿಗೆ ಹುಟ್ಟೂರ ಶ್ರದ್ಧಾಂಜಲಿ ಸಜೀಪದ ಕರ್ನಾಟಕ ಬ್ಯಾಂಕ್ ವಠಾರದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ ಅಧ್ಯಕ್ಷತೆಯಲ್ಲಿ ಜರಗಿತು.
ಅನಂತ ಕೃಷ್ಣರ ತಂದೆಯವರಾದ ನಾರಾಯಣರಾವ್ ಶಾನುಭೋಗರಾಗಿ ಸಜಿಪದ ಆಸುಪಾಸು ಗ್ರಾಮಗಳಲ್ಲಿ ಜನಾನುರಾಗಿಯಾಗಿದ್ದರು. ಅವರ ಪುತ್ರರಾದ ಅನಂತಕೃಷ್ಣ ಸರಳ ಸಜ್ಜನಿಕೆಯ ಮೈಗೂಡಿಸಿಕೊಂಡು ಬ್ಯಾಂಕ್ ಅನ್ನು ವಿಶ್ವಮಟ್ಟದಲ್ಲಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಸಜೀಪ ದಂತ ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಶಾಖೆಯನ್ನು ಒದಗಿಸಿಕೊಟ್ಟು ಗ್ರಾಮದ ಆರ್ಥಿಕ ಸುಧಾರಣೆಗೆ ಕಾರಣೀಭೂತರಾಗಿದ್ದಾರೆ ಎಂದು ಈ ವೇಳೆ ಪೂಂಜ ಹೇಳಿದರು.
ಬ್ಯಾಂಕ್ ಸಜಿಪಮೂಡ ಶಾಖಾ ಪ್ರಬಂಧಕರಾದ ಮಿಥಿಲೇಶ್ ಕುಮಾರ್, ಸುಮನ್ ಕೆಎ, ರಾಮಚಂದ್ರಯ್ಯ, ರಾಘವೇಂದ್ರ ಕುಮಾರ್, ಪ್ರಣಮ್, ಪ್ರಶಾಂತ್ ಕುಮಾರ್, ಪ್ರಮುಖರಾದ ಎo ಸುಬ್ರಹ್ಮಣ್ಯ ಭಟ್ಮ ಜಯಶಂಕರ ಬಾಸ್ರಿತ್ತಾಯ, ವೆಂಕಟೇಶ್ವರ ಭಟ್, ದೇವಿ ಪ್ರಸಾದ್ ಪೂಂಜಾ, ಕೆ.ಸೀತಾರಾಮ ಶೆಟ್ಟಿ, ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಬಾಬು ಗಾವಂಕರ್, ಹರೀಶ್ ಗಟ್ಟಿ, ವೆಂಕಟ್ರಾಯ ಮಯ್ಯ, ರಾಮಚಂದ್ರ ಮಯ್ಯ, ಶ್ರೀನಾಥ್ ಶೆಟ್ಟಿ, ವಿಶ್ವನಾಥ್ ಬೆಲ್ಚಡ, ವಿಶ್ವನಾಥ್ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…