ಮಹಾತ್ಮಾ ಗಾಂಧೀಜಿಯವರ ಕನಸಿನ ಭಾರತದ ತಳಹದಿಯಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಗಾಗಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಸಮಾಜದ ಎಲ್ಲಾ ವಿಭಾಗದ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಹಾಗೂ ಯೋಜನೆಗಳನ್ನು ತಲುಪಿಸುವಲ್ಲಿ ವಿಶೇಷ ಪಾತ್ರವಹಿಸಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮುಂದೆ ನಡೆಯಲಿರುವ ಚಿನಾವಣೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಎಲ್ಲಾ ಜಾತಿ-ವರ್ಗದವರಿಗೆ ಮೀಸಲಾತಿಯ ಮೂಲಕ ನ್ಯಾಯ ಒದಗಿಸಿದ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸುವ ಮೂಲಕ ಗ್ರಾಮಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಅವಕಾಶ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಿಪು ಬ್ಲಾಕ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ವಹಿಸಿದ್ದರು. ಬಳಿಕ ನಡೆದ ವಿಶೇಷ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ನದ್ ಬಡಗನ್ನೂರು, ಪುತ್ತೂರಿನ ನ್ಯಾಯವಾದಿ ದುರ್ಗಾಪ್ರಸಾದ್ ಪಂಚಾಯತ್ ರಾಜ್ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷದ ಕೊಡುಗೆಯ ಬಗ್ಗೆ ವಿಷಯ ಮಂಡಿಸಿದರು.ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಡಿಪು ಬ್ಲಾಕ್ ಸಂಯೋಜಕ ಹೈದರ್ ಕೈರಂಗಳ ಪ್ರಸ್ತಾವನೆಯ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ , ಉಮ್ಮರ್ ಪಜೀರ್, ಫಾರೂಕ್ ಫರಂಗಿಪೇಟೆ, ಪ್ರಕಾಶ್ ಶೆಟ್ಟಿ ತುಂಬೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ನಾಸಿರ್ ನಡುಪದವು, ಪದ್ಮನಾಭ ನರಿಂಗಾನ, ಇಮ್ತಿಯಾಝ್ ತುಂಬೆ, ಅರುಣ್ ಡಿಸೋಜ, ಸಮೀರ್ ಪಜೀರ್, ಸತ್ತಾರ್ ಕೈರಂಗಳ, ಜಗದೀಶ್ ಪಲಾಯಿ, ಜಗದೀಶ್ ಗಟ್ಟಿ ತುಂಬೆ, ಸೀತಾರಾಮ ಶೆಟ್ಟಿ, ಹನೀಫ್ ಚಂದಹಿತ್ಲು ಭಾಗವಸಿದ್ದರು. ಬಶೀರ್ ಮುಡಿಪು ಕಾರ್ಯಕ್ರಮ ನಿರೂಪಿಸಿದರು ರಝಾಕ್ ಕುಕ್ಕಾಜೆ ದನ್ಯವಾದ ಸಲ್ಲಿಸಿದರು.