ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲು ಜನಸಾಮಾನ್ಯರಿಂದ ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಸೌಕರ್ಯಗಳನ್ನು ಒದಗಿಸಿ, ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಮಾಜಿಕ ಸಂಘಟನೆಗಳು ಅಕ್ಟೋಬರ್ 19ರಂದು ಬಂಟ್ವಾಳದಲ್ಲಿ ಧರಣಿ ನಡೆಸಲಿವೆ.
ಬಂಟ್ವಾಳ: ಅಕ್ಟೋಬರ್ 19ರಂದು ಬಂಟ್ವಾಳ ಶಾಸಕರ ಕಚೇರಿ ಮುಂದೆ ಹಾಗೂ ಮಿನಿ ವಿಧಾನಸೌಧ ಮುಂಭಾಗ ಧರಣಿ ನಡೆಸಲು ವಿವಿಧ ಸಂಘಟನೆಗಳು ತೀರ್ಮಾನಿಸಿವೆ. ಬಂಟ್ವಾಳ ತಾಲೂಕಿನ ಸಾಮಾಜಿಕ ಕಾರ್ಯಕರ್ತರ ಸಭೆ ಶನಿವಾರ ಬಿ.ಸಿ.ರೋಡಿನ ಸಿ.ಐ.ಟಿ.ಯು ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾರ್ಗದರ್ಶನ ನೀಡಿದರು.
ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಸರಕಾರ ಕಡೆಗಣಿಸುತ್ತಿರುವುದರ ಪರಿಣಾಮ ಜನಸಾಮಾನ್ಯರು ಗುಣಮಟ್ಟದ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗಳು ಜನರ ಅನಾರೋಗ್ಯಕ್ಕೆ ಪರಿಹಾರ ಒದಗಿಸಲು ವಿಫಲವಾಗಿದ್ದರೆ, ಖಾಸಗಿ ಆಸ್ಪತ್ರೆಗಳ ದರಗಳು ಜನಸಾಮಾನ್ಯರ ಬದುಕುವ ಹಕ್ಕನ್ನೆ ನಿರಾಕರಿಸುತ್ತಿದೆ. ಆರೋಗ್ಯ ಕ್ಷೇತ್ರದ ವ್ಯಾಪಾರೀಕರಣ ನೀತಿಯ ವಿರುದ್ಧ ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ರೂಪಿಸಲು ಸಭೆ ತೀರ್ಮಾನಿಸಿತು.
ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಬೂಡಾ ಮಾಜಿ ಅಧ್ಯಕ್ಷರಾದ ಸದಾಶಿವ ಬಂಗೇರ, ಸಿ.ಪಿ.ಐನ ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ.ಶೇಖರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತೀ ಪ್ರಶಾಂತ್, ಎ.ಐ.ವೈ.ಎಫ್ ಮುಖಂಡರಾದ ಸುರೇಶ್ ಕುಮಾರ್ ಬಂಟ್ವಾಳ, ಪ್ರೇಮನಾಥ್, ಕಲಾವಿದರಾದ ಜನಾರ್ಧನ ಕೆಸರಗದ್ದೆ, ನಿತಿನ್ ಬಂಗೇರ, ಜೆಡಿಎಸ್ ಮುಖಂಡರಾದ ಹಾರೂನ್ ರಶೀದ್, ನ್ಯಾಯವಾದಿ ಉಮೇಶ್ ಕುಮಾರ್ .ವೈ ,ಕರ್ನಾಟಕ ರಾಜ್ಯ ರೈತ ಸಂಘದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಮಹಮ್ಮದ್ ಇಕ್ಬಾಲ್ ಹಳೆಮನೆ, ಅಂಬೇಡ್ಕರ್ ಯುವ ವೇದಿಕೆ ಮುಖಂಡರಾದ ರಾಜಾ ಪಲ್ಲಮಜಲು, ಪ್ರೀತಂ, ಮಾನವ ಬಂಧುತ್ವ ವೇದಿಕೆಯ ರಾಜಾ ಚೆಂಡ್ತಿಮಾರ್,ಸಿ.ಐ.ಟಿ.ಯು ಮುಖಂಡರಾದ ಉದಯ ಕುಮಾರ್ ಬಂಟ್ವಾಳ ,ದಿನೇಶ ಆಚಾರಿ, ಪ್ರಜಾಪರಿವರ್ತನಾ ವೇದಿಕೆಯ ಕೃಷ್ಣಪ್ಪ ಪುದ್ದೊಟ್ಟು, ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ತುಂಬೆ, ವೆಲ್ ಪೇರ್ ಪಾರ್ಟಿ ಆಫ್ ಇಂಡಿಯಾದ ಸಲೀಂ ಬೋಳಂಗಡಿ, ಮಹಮ್ಮದ್ ಇಸಾಕ್, ಅಬ್ದುಲ್ ಕುಂಞ, ನ್ಯಾಯವಾದಿ ಅಬ್ದುಲ್ ಜಲೀಲ್,ಸಾಮಾಜಿಕ ಕಾರ್ಯಕರ್ತ ರಾದ ಜಗನ್ನಾಥ ಬಂಟ್ವಾಳ, ದಿವಾಕರ ಪೂಜಾರಿ ಮುಂತಾದವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ ವಹಿಸಿದ್ದರು. ನ್ಯಾಯವಾದಿ ತುಳಸೀದಾಸ್ ವಿಟ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.