ಜಿಲ್ಲಾ ಸುದ್ದಿ

ಗಮನಿಸಿ, ನಿಮ್ಮ ಸ್ನೇಹಿತನ ಹೆಸರಲ್ಲೇ ಫೇಕ್ ಐಡಿಯಿಂದ ಹಣ ಕೇಳುವ ಖದೀಮರಿದ್ದಾರೆ!!

 

ಜಾಹೀರಾತು

ಕೆಲ ದಿನಗಳ ಹಿಂದೆ ಪೊಲೀಸ್ ಅಧಿಕಾರಿಗಳ, ಹೆಸರಲ್ಲಿ ಫೇಸ್ ಬುಕ್ ನಕಲಿ ಖಾತೆಯನ್ನು ಸೃಷ್ಟಿಸಿ ಹಣ ಪೀಕಿಸುತ್ತಿದ್ದ ವಂಚಕರು, ಈಗ ರಾಜಕಾರಣಿಗಳ ಹಾಗೂ ಜನಸಾಮಾನ್ಯರ ಹೆಸರಲ್ಲೂ ಖಾತೆ ತೆರೆದಿದ್ದಾರೆ. ಅಧಿಕಾರಿಗಳು, ರಾಜಕೀಯ ನಾಯಕರು, ಪ್ರಮುಖ ಹುದ್ದೆಗಳಲ್ಲಿರುವ ಗಣ್ಯರ ಹೆಸರಲ್ಲಿ ನಕಲಿ ಖಾತೆ ತೆರೆಯುವ ಚಾಳಿ ಇನ್ನೂ ಮುಂದುವರಿದಿದೆ ಎಂಬುದಕ್ಕೆ ತಾಜಾ ನಿದರ್ಶನ ಬಂಟ್ವಾಳ ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅವರ ಫೇಸ್ ಬುಕ್ ಅಕೌಂಟ್ ನ ಡುಪ್ಲಿಕೇಟ್ ಮಾಡಲಾಗಿರುವುದು.

ಯಥಾಪ್ರಕಾರ ವಂಚಕರು ನಕಲಿ ಅಕೌಂಟ್ ಮೂಲಕ ಶೆಟ್ಟಿ ಅವರ ಸ್ನೇಹಿತರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಅವರು ಸ್ನೇಹಿತರಾದೊಡನೆ ಅವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಗೂಗಲ್ ಪೇ, ಫೋನ್ ಪೇ ಅಥವಾ ಅಕೌಂಟಿಗೆ ಹಾಕಿ, ನಾಳೆ ಬೆಳಗ್ಗೆ 10 ಗಂಟೆಗೆ ವಾಪಸ್ ಮಾಡುತ್ತೇನೆ ಎಂಬ ಆಗ್ರಹವನ್ನೂ ವಂಚಕರು ಮಾಡಿದ್ದು, ಇದನ್ನು ನಂಬಿ ಕೆಲವರು ಮೋಸ ಹೋಗಿದ್ದಾರೆ. ಇದೇ ರೀತಿ ಶಿಕ್ಷಣ ಸಂಸ್ಥೆಯೊಂದರ ಸಿಬ್ಬಂದಿಯ ಹೆಸರಲ್ಲೂ ನಕಲಿ ಖಾತೆ ಸೃಷ್ಟಿಯಾಗಿದ್ದು, ಆ ಖಾತೆಯಿಂದ ಹಲವರಿಗೆ ಹಣಕ್ಕೆ ಬೇಡಿಕೆ ಹೋಗಿದೆ. ಪತ್ರಕರ್ತರು, ಪೊಲೀಸರು, ಶಿಕ್ಷಕರು, ರಾಜಕಾರಣಿಗಳು, ಕಲಾವಿದರ ಹೆಸರಲ್ಲಿ ಈಗಾಗಲೇ ಇಂಥ ನಕಲಿ ಡುಪ್ಲಿಕೇಟ್ ಖಾತೆಗಳು ಸೃಷ್ಟಿಯಾಗಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ಪ್ರಕರಣದಲ್ಲಿ ದೇವದಾಸ ಶೆಟ್ಟಿಯವರು ಸೈಬರ್ ಕ್ರೈಮ್ ವಿಭಾಗಕ್ಕೆ ಈಗಾಗಲೇ ದೂರು ನೀಡುವುದಾಗಿ ತಿಳಿಸಿದ್ದಾರೆ.

ಸೈಬರ್ ವಂಚನೆಯ ಈ ವಿಧಾನ ನಡೆಯುತ್ತಿರುವ ಕುರಿತು ಬಂಟ್ವಾಳನ್ಯೂಸ್ ಕಳೆದ ಸೆಪ್ಟೆಂಬರ್ ನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts