ವಿಟ್ಲ

ಚಂದಳಿಗೆ ಜಂಕ್ಷನ್ ನಲ್ಲಿ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ವಿಟ್ಲ: ಯುವಕೇಸರಿ ಅಬೀರಿಅತಿಕಾರಬೈಲು ಚಂದಳಿಕೆ ಸಂಘಟನೆಯ ವತಿಯಿಂದ ನೂತವಾಗಿ ನಿರ್ಮಾಣವಾದ ಪ್ರಯಾಣಿಕರ ತಂಗುದಾಣವನ್ನು ಚಂದಳಿಕೆ ಜಂಕ್ಷನ್  ಲೋಕಾರ್ಪಣೆಗೊಳಿಸಲಾಯಿತು. ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ ದೀಪ ಬೆಳಗಿಸುವುದರ  ಮೂಲಕ ಪ್ರಯಾಣಿಕರ ತಂಗುದಾಣವನ್ನು  ಉದ್ಘಾಟಿಸಿದರು.

ಸಂದರ್ಭ ಮಾತನಾಡಿದ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ಅವರು ಕೊರೊನಾ ಸೋಂಕು ಅನ್ನು ತಡೆಯುವ ಉದ್ದೇಶದಿಂದ ಮಾಸ್ಕ್ ಧರಿಸುತ್ತೇವೆ. ಅದೇ ರೀತಿ ಬೈಕ್ ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಬೇಕು. ವಿಟ್ಲ ಭಾಗದಲ್ಲಿ ವರ್ಷದಲ್ಲಿ ಹೆಲ್ಮಟ್ ಧರಿಸದೇ ಬೈಕ್  ಅಪಘಾತದಲ್ಲಿ ಏಳು ಸಾವು ಸಂಭವಿಸಿದೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದ ಅವರು ನಕಲಿ ಫೇಸ್ ಬುಕ್ ಖಾತೆಯಿಂದ ಜನರನ್ನು ವಂಚಿಸುವ ಕಾರ್ಯಗಳು ನಡೆಯುತ್ತಿದೆ. ಬಗ್ಗೆ ಭಾರೀ ಜಾಗರೂಕತೆಯಿಂದ ಇರಬೇಕು ಎಂದು ತಿಳಿಸಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವಿಟ್ಲ ಪ್ರಖಂಡದ ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ,ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ  ಅರುಣ್ ವಿಟ್ಲ, ಪ್ರಗತಿ ಪರ ಕೃಷಿಕ  ಮೋಹನ್ ಗೌಡ ಕಾಯರ್ಮಾರ್ , ಯುವಕೇಸರಿಯ ಗೌರವ ಸಲಹೆಗಾರ ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ, ಗೋವಿಂದರಾಜ್ ಪೆರುವಾಜೆ ವಿಟ್ಲ, ಬಿಜೆಪಿ ಮಹಾಶಕ್ತಿ ಕೇಂದ್ರದ ಸಾಮಾಜಿಕ ಜಾಲತಾಣದ ಪ್ರಮುಖ್ ಕೃಷ್ಣ ಮುದೂರು , ಯುವಕೇಸರಿಯ ಗೌರವ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಅಧ್ಯಕ್ಷರಾದ ಗಂಗಾಧರ ಪೂಜಾರಿ ಪರನೀರು, ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ ಕೇಪುಳಗುಡ್ಡೆ ಮತ್ತು ಯುವಕೇಸರಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಯುವಕೇಸರಿಯ ಸುಶಾಂತ್ ಸಾಲಿಯಾನ್ ಚಂದಳಿಕೆ ಸ್ವಾಗತಿಸಿ, ದಿವಾಕರ ಶೆಟ್ಟಿ ಅಬೀರಿ ವಂದಿಸಿ, ವಿಠಲ ಪೂಜಾರಿ ಅತಿಕಾರಬೈಲು ನಿರೂಪಿಸಿದರು. ಗಣೇಶ್ ಅಬೀರಿ ಸಹಕರಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ