ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ವಿಟ್ಲ, ಗ್ರಾ.ಪಂ.ಕೆದಿಲ ಸಂಯುಕ್ತ ಆಶ್ರಯದಲ್ಲಿ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ” ಯೋಜನೆಯಡಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಜಾಗೃತಿ ಜಾಥ ಕಾರ್ಯಕ್ರಮ ಕೆದಿಲ ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಉದ್ಘಾಟಿಸಿ ಮಾತನಾಡಿ, ಹೆಣ್ಣು ಮಕ್ಕಳನ್ನು ಪೂಜನೀಯ ಭಾವದಿಂದ ನೋಡಿಕೊಂಡಾಗ ಖಂಡಿತ ಅಂತಹ ಗ್ರಾಮ ಜಿಲ್ಲೆ, ರಾಜ್ಯ ದೇಶ ಸಂಪತ್ಬರಿತವಾಗುತ್ತದೆ, ಜೊತೆಗೆ ಈ ದೇಶದ ಭವ್ಯವಾದ ಸಂಸ್ಕ್ರತಿ ಯನ್ನು ಭದ್ರವಾಗಿ ಉಳಿಸಿ ಬೆಳೆಸಲು ಸಾಧ್ಯ ವಾಗುತ್ತದೆ ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಕುಲಾಲ್ ಅಧ್ಯಕ್ಷ ತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ, ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷೆ ಜೆಸಿಂತಾ, ಸಂಪನ್ಮೂಲ ವ್ಯಕ್ತಿ ಬಾಲನ್ಯಾಯಮಂಡಳಿ ಸದಸ್ಯ ಉಮೇಶ್ ನಿರ್ಮಲ್, ವಿಟ್ಲ ಸಿ.ಡಿ.ಪಿ.ಒ ಸುಧಾಜೋಶಿ, ಗ್ರಾ.ಪಂ.ಪಿ.ಡಿ.ಒ ಹೊನ್ನಪ್ಪ ಗೌಡ , ವಿಟ್ಲ ಎಸಿಡಿಪಿಒ ಉಷಾ ಡಿ. ಇದ್ದರು. ಹಿರಿಯ ಮೇಲ್ವಿಚಾರಕಿ ಶಾರದಾ ಮೇಲ್ವಿಚಾರಕಿಯರಾದ ಲೋಲಾಕ್ಷಿ, ಗುಣವತಿ, ಸೋಮಕ್ಕ, ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.ಪೆರಮೊಗರು ಜಂಕ್ಷನ್ನಲ್ಲಿ ಜಾಗೃತಿಯ ಜಾಥ ಉದ್ಘಾಟಿಸಲಾಯಿತು. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಹಾಗೂ ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಏರ್ಪಡಿಸಿ ಬಹುಮಾನ ನೀಡಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿನಿಗಳಾದ ಹರ್ಷಿತಾ, ಸುದೀಕ್ಷಾ ಕೊಡಾಜೆ, ಆಶಿಕಾ, ಚೈತ್ರಾ ಎನ್ ಅವರಿಗೆ ಹಾಗೂ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ವಿಕಲಾಂಗ ವಿದ್ಯಾರ್ಥಿನಿ ಕು.ಯಶಸ್ವಿನಿ ಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೆಣ್ಷು ಮಕ್ಕಳ ರಕ್ಷಣೆ, ಶಿಕ್ಷಣ, ಹಾಗೂ ಪೋಷಣೆಯ ಬಗ್ಗೆ ಪ್ರತಿಜ್ಞೆ ಸ್ವೀಕಾರ ಹಾಗೂ ಕೋವಿಡ್ ೧೯ ಸಂಬಂಧಿಸಿದ ಕರ್ತವ್ಯ ಗಳನ್ನು ತಪ್ಪದೆ ಪಾಲಿಸುತ್ತೇನೆ ಎಂಬ ಪ್ರತಿಜ್ಞೆ ಸ್ವೀಕಾರ ನಡೆಯಿತು.ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಸ್ವಾಗತಿಸಿ. ಮೇಲ್ವಿಚಾರಕಿ ರೂಪ ವಂದಿಸಿದರು.ಮೇಲ್ವಿಚಾರಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.