ಬಂಟ್ವಾಳನ್ಯೂಸ್, ವಿಟ್ಲ ವರದಿ: ಶುಕ್ರವಾರ ಬೆಳಗಿನ ಜಾವ ನಡೆದ ಆತಂಕಕಾರಿ ಘಟನೆಯಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಪೇಟೆಯಲ್ಲಿ ಒಂಟಿ ಮಹಿಳೆ ಇರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಮಹಿಳೆಗೆ ಹಲ್ಲೆ ನಡೆಸಿ, ಕಟ್ಟಿಹಾಕಿ ದರೋಡೆಗೆ ಯತ್ನಿಸಿದ್ದಾಗಿ ವರದಿಯಾಗಿದೆ. ಮೇಗಿನಪೇಟೆ ನಿವಾಸಿ, ಒಂಟಿಯಾಗಿ ಜೀವನ ನಡೆಸುತ್ತಿರುವ ಲಲಿತಾ ಅವರ ಮನೆಯ ಮುಂಬಾಗಿಲು ಮೂಲಕ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ, ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈ ಕಟ್ಟಿ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು,ತನಿಖೆ ನಡೆಯುತ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ವಿಟ್ಲ ಠಾಣೆಯಲ್ಲಿ ದರೋಡೆ ಯತ್ನ ಎಂಬ ಪ್ರಕರಣ ದಾಖಲಾಗಿದೆ.