ಬಂಟ್ವಾಳ ಪುರಸಭೆ ಸಹಿತ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಬಂಟ್ವಾಳದಲ್ಲಿ ಸಾಮಾನ್ಯ ವಿಭಾಗದ ಸದಸ್ಯರು ಅಧ್ಯಕ್ಷರಾಗಲು ಅರ್ಹರು. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾರಿಗೆ ಆಡಳಿತ ಎಂಬುದು ಕುತೂಹಲಕಾರಿ. ಅಧ್ಯಕ್ಷ ಸ್ಥಾನಕ್ಕೆ ಎಲ್ಲ 27 ಸದಸ್ಯರೂ ಅರ್ಹರು.
2018ರಲ್ಲಿ ಚುನಾವಣೆ ನಡೆದಿದ್ದು, ಒಂದು ಬಾರಿ ಮೀಸಲಾತಿ ಪ್ರಕಟಗೊಂಡಿತ್ತು. ಆದರೆ ವಿಚಾರ ನ್ಯಾಯಾಲಯ ಮೆಟ್ಟಿಲೇರಿದ ಕಾರಣ ಮತ್ತೆ ವಿಳಂಬಗೊಂಡಿತು. ಅದಾದ ಬಳಿಕ ಮೀಸಲಾತಿ ಪಟ್ಟಿ ಮತ್ತೆ ಘೋಷಣೆಯಾಯಾಯಿತು. ಅದೂ ಬದಲಾಗಿದೆ.
ಪುರಸಭೆಯ ಒಟ್ಟು 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಗೆದ್ದಿದ್ದು, ಬಿಜೆಪಿಗೆ ಲೋಕಸಭಾ ಸದಸ್ಯ ಮತ್ತು ವಿಧಾನಸಭಾ ಸದಸ್ಯರ ಮತ ಸೇರುತ್ತದೆ.
ಫಲಿತಾಂಶದ ಹಿನ್ನೋಟ ಇಲ್ಲಿದೆ: ಬಿಜೆಪಿಯ ಮೀನಾಕ್ಷಿ ಜೆ. ಗೌಡ, ರೇಖಾ ರಮಾನಾಥ ಪೈ , ದೇವಕಿ ಶಿವಪ್ಪ ಪೂಜಾರಿ, ಶಶಿಕಲಾ ಪ್ರಭಾಕರ್ , ಶೋಭಾ ಹರಿಶ್ಚಂದ್ರ , ಜಯಂತಿ ವಸಂತ ಕುಲಾಲ್, ವಿದ್ಯಾವತಿ ಪ್ರಮೋದ್ ಕುಮಾರ್ , ಚೈತನ್ಯಾ ಎ. ದಾಸ್ ಎಸ್.ಡಿ.ಪಿ.ಐನ ಸಂಶದ್, ಝೀನತ್ ಕಾಂಗ್ರೆಸ್ ನ ಜೆಸಿಂತಾ ಡಿಸೋಜ , ಗಾಯತ್ರಿ ಜೆ ಮಹಿಳಾ ಸದಸ್ಯರು.
ಕಳೆದ ಸಾಲಿನ ಸದಸ್ಯರಾದ ಎ. ಗೋವಿಂದ ಪ್ರಭು (ಬಿಜೆಪಿ), ಪಿ.ರಾಮಕೃಷ್ಣ ಆಳ್ವ, ಮೊಹಮ್ಮದ್ ನಂದರಬೆಟ್ಟು, ಗಂಗಾಧರ, ಬಿ.ವಾಸು ಪೂಜಾರಿ, ಮಹಮ್ಮದ್ ಶರೀಫ್, ಜೆಸಿಂತಾ (ಕಾಂಗ್ರೆಸ್), ಮೊನೀಶ್ ಆಲಿ (ಎಸ್.ಡಿ.ಪಿ.ಐ. ) ಗೆಲ್ಲುವುದರೊಂದಿಗೆ 8 ಮಂದಿ ಮತ್ತೆ ಪುರಸಭೆಯ ಕಲಾಪಗಳಲ್ಲಿ ಭಾಗವಹಿಸಲಿದ್ದಾರೆ.
ಇವರಲ್ಲಿ ಎ. ಗೋವಿಂದ ಪ್ರಭು ಸತತ ಏಳನೇ ಬಾರಿ ಜಯ ಗಳಿಸಿದ್ದು ದಾಖಲೆ. ಕಳೆದ ಅವಧಿಯ ಕಾಂಗ್ರೆಸ್ ಆಡಳಿತದ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಆಳ್ವ ಮತ್ತು ಮೊಹಮ್ಮದ್ ನಂದರಬೆಟ್ಟು ಗೆಲುವು ಸಾಧಿಸಿದ್ದಾರೆ. ಎಲ್ಲ ವಾರ್ಡುಗಳ ಜಯಶಾಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ.
- ವಾರ್ಡ್ 1 ಲೊರೆಟ್ಟೊಪದವು: ಕಾಂಗ್ರೆಸ್ ನ ಬಿ.ವಾಸು ಪೂಜಾರಿ ಅವರು 29 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
- ವಾರ್ಡ್ 2 ಮಂಡಾಡಿ: ಕಾಂಗ್ರೆಸ್ ನ ಗಂಗಾಧರ ಮಂಡಾಡಿ 142 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್3 ಮಣಿ: ಬಿಜೆಪಿಯ ಮೀನಾಕ್ಷಿ ಜೆ. ಗೌಡ ಅವರು 136 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 4 ಕಾಲೇಜು ರಸ್ತೆ: ಬಿಜೆಪಿಯ ರೇಖಾ ರಮಾನಾಥ ಪೈ ಅವರು 104 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 5 ಜಕ್ರಿಬೆಟ್ಟು: ಕಾಂಗ್ರೆಸ್ ನ ಜನಾರ್ದನ ಚಂಡ್ತಿಮಾರ್ 154 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 6 ಹೊಸ್ಮರ್ : ಬಿಜೆಪಿಯ ದೇವಕಿ ಶಿವಪ್ಪ ಪೂಜಾರಿ 274 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 7 ಬಂಟ್ವಾಳ ಪೇಟೆ: ಬಿಜೆಪಿಯ ಶಶಿಕಲಾ ಪ್ರಭಾಕರ್ 345 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 8 ಕೆಳಗಿನಪೇಟೆ: ಎಸ್.ಡಿ.ಪಿ.ಐ.ನ ಮುನೀಶ್ ಆಲಿ 102 ಮತಗಳಿಂದ ಜಯ ಗಳಿಸಿದ್ದಾರೆ.
- ವಾರ್ಡ್ 9 ಭಂಡಾರಿಬೆಟ್ಟು: ಬಿಜೆಪಿಯ ಹರಿಪ್ರಸಾದ್ 127 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 10 ಕಾಮಾಜೆ: ಬಿಜೆಪಿಯ ಶೋಭಾ ಹರಿಶ್ಚಂದ್ರ 287 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
- ವಾರ್ಡ್ 11 ಸಂಚಯಗಿರಿ: ಬಿಜೆಪಿಯ ಜಯಂತಿ ವಸಂತ ಕುಲಾಲ್ 195 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 12 ಅಜ್ಜಿಬೆಟ್ಟು: ಬಿಜೆಪಿಯ ವಿದ್ಯಾವತಿ ಪ್ರಮೋದ್ ಕುಮಾರ್ 351 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 13 ಗೂಡಿನಬಳಿ: ಎಸ್.ಡಿ.ಪಿ.ಐನ ಸಂಶದ್ 262 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 14 ಜೋಡುಮಾರ್ಗ–ಕೈಕುಂಜೆ: ಎಸ್.ಡಿ.ಪಿ.ಐನ ಝೀನತ್ 120 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 15 ಎಪಿಎಂಸಿ – ಕೈಕುಂಜೆ: ಬಿಜೆಪಿಯ ಅರ್ಲ ಗೋವಿಂದ ಪ್ರಭು 40 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
- ವಾರ್ಡ್ 16 ನಂದರಬೆಟ್ಟು: ಕಾಂಗ್ರೆಸ್ ನ ಮೊಹಮ್ಮದ್ ನಂದರ ಬೆಟ್ಟು 4 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 17 ಪರ್ಲಿಯಾ: ಕಾಂಗ್ರೆಸ್ ನ ಲುಕ್ಮಾನ್ 79 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 18 ಶಾಂತಿ ಅಂಗಡಿ: ಕಾಂಗ್ರೆಸ್ ನ ಹಸೈನಾರ್ 231 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 19 ಅದ್ದೇಡಿ: ಕಾಂಗ್ರೆಸ್ ನ ಮಹಮ್ಮದ್ ಶರೀಫ್ 47 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
- ವಾರ್ಡ್ 20 ಮೊಡಂಕಾಪು: ಕಾಂಗ್ರೆಸ್ ನ ಲೋಲಾಕ್ಷ ಶೆಟ್ಟಿ 98 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
- ವಾರ್ಡ್ 21 ತಲಪಾಡಿ: ಕಾಂಗ್ರೆಸ್ ನ ಪಿ.ರಾಮಕೃಷ್ಣ ಆಳ್ವ 100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 22 ಪಲ್ಲಮಜಲು: ಬಿಜೆಪಿಯ ಚೈತನ್ಯಾ ಎ. ದಾಸ್ 103 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
- ವಾರ್ಡ್ 23 ಜೈನರಪೇಟೆ: ಎಸ್.ಡಿ.ಪಿ.ಐನ ಮೊಹಮ್ಮದ್ ಇದ್ರಿಸ್ 90 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
- ವಾರ್ಡ್ 24 ಆಲಡ್ಕ: ಕಾಂಗ್ರೆಸ್ ನ ಅಬುಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ 407 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 25 ಬೋಳಂಗಡಿ: ಕಾಂಗ್ರೆಸ್ ನ ಜೆಸಿಂತಾ ಡಿಸೋಜ 142 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 26 ಮೆಲ್ಕಾರ್: ಕಾಂಗ್ರೆಸ್ ನ ಗಾಯತ್ರಿ ಜೆ 92 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
- ವಾರ್ಡ್ 27 ಬೊಂಡಾಲ: ಬಿಜೆಪಿಯ ಜಯರಾಮ 215 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
Harish Mambady2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ