ಗುರುವಾರ ಬೆಳಗ್ಗೆ ಸುಳ್ಯ ಸಂಪಾಜೆ ನಿವಾಸಿಯಾದ ಸಂಪತ್ ಕುಮಾರ್ (40) ಎಂಬವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ್ದು, ಈ ಕುರಿತು ಪೊಲೀಸ್ ತನಿಖೆ ತೀವ್ರಗೊಂಡಿದೆ.
ಸುಳ್ಯ ಕಸಬಾ ಗ್ರಾಮದ ಶಾಂತಿನಗರದಲ್ಲಿರುವ ಸಂಪತ್, ಬಾಡಿಗೆ ಮನೆಯಿಂದ ಬೆಳಿಗ್ಗೆ ಸಮಯ ಸುಮಾರು 7.15ಗಂಟೆಗೆ ಹೊರಟು ಮನೆಯ ಪಕ್ಕದಲ್ಲಿದ್ದ ಕಾರಿನಲ್ಲಿ ಕುಳಿತಾಗ ಸುಮಾರು ನಾಲ್ಕು ಜನ ದುಷ್ಕರ್ಮಿಗಳ ತಂಡ ಸಂಪತ್ ಕುಳಿತಿದ್ದ ಕಾರಿನ ಗಾಜನ್ನು ಒಡೆದು ತಲವಾರು, ಚೂರಿ ಮತ್ತು ಕೋವಿ ಯಿಂದ ದಾಳಿ ನಡೆಸಿದ್ದು, ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸಂಪತ್ ನನ್ನು ದುಷ್ಕರ್ಮಿಗಳ ತಂಡ ತಲವಾರು ಮತ್ತು ಚೂರಿಯಿಂದ ಕಡಿದು ಕೋವಿಯಿಂದ ಗುಂಡು ಹಾರಿಸಿದ್ದು, ಈ ವೇಳೆ ತಡೆಯಲು ಬಂದ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದು, ತೀವ್ರ ಗಾಯಗೊಂಡಿದ್ದ ಸಂಪತ್ ಕುಮಾರ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 74/2020 ಕಲಂ 448,324,302 R/W 34 ಐಪಿಸಿ ಮತ್ತು ಕಲಂ 3 & 25 ಅರ್ಮ್ಸ್ ಆಕ್ಟ್ ನಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ, ಪತ್ತೆಕಾರ್ಯ ನಡೆಸಲಾಗುತ್ತಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…