ಬಂಟ್ವಾಳ: ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸವನ್ನು ಮಂಗಳವಾರ ನೆರವೇರಿಸಿದರು.
ಐಸರಗೋಳಿ-ಪಾಂಗಳ ರಸ್ತೆ 5 ಲಕ್ಷ, ಕೋಟಿಕುಮೇರು ರಸ್ತೆ 5 ಲಕ್ಷ, ನೀರಪಳಿಕೆ-ಮುಕ್ಕುಡ ರಸ್ತೆ 15 ಲಕ್ಷ ಅನೆಗುಡ್ಡೆ ರಸ್ತೆ 5 ಲಕ್ಷ ರೂ ಮಂಜೂರಾಗಿದ್ದು, ಈ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಲಾಯಿತು. ಬೂಡ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಪ್ರಮುಖರಾದ ಸಂಜೀವ ಪೂಜಾರಿ, ಪ್ರಕಾಶ್ ಅಂಚನ್, ಸೀತಾರಾಮ ಪೂಜಾರಿ, ರಮನಾಥ ರಾಯಿ, ಚಿದಾನಂದ ರೈ, ಪುರುಷೋತ್ತಮ ಶೆಟ್ಟಿ, ಲಕ್ಷ್ಮೀನಾರಾಯಣ ಗೌಡ, ಚಿದಾನಂದ ಕುಲಾಲ್, ಪೂವಪ್ಪ ಮೆಂಡನ್, ಬಾಲಕೃಷ್ಣ ಪೂಜಾರಿ, ಹರೀಶ್ ಪೂಜಾರಿ, ದಯಾನಂದ ಗೌಡ, ಶಾಲಿನಿ ಆಚಾರ್ಯ, ಶಶಿಧರ ಕೈಲಾರ್, ಆನಂದ ಕೋಟ್ಯಾನ್, ಪ್ರವೀಣ್ ಅಮೀನ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…