ಬಂಟ್ವಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 12ನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರವೂ ಬಂಟ್ವಾಳ ಸಮಿತಿಯ ಸದಸ್ಯರು ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖರಾದ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಹಲವಾರು ಸೋದರಿ ವರ್ಷಗಳಿಂದ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲಾ ಹಂತಗಳಲ್ಲಿ ಹೋರಾಟ ನಡೆಸಿದರೂ ಸಹ ಸ್ಪಂದಿಸದೆ, ಸರಕಾರದ ನೌಕರ ವಿರೋಧಿ ಧೋರಣೆ ಹಾಗೂ ಒಡೆದಾಳುವ ಪ್ರವೃತ್ತಿ ಮತ್ತು ಕ್ರಮ ಅನುಸರಿಸುತ್ತಿರಯವುದು ವಿಷಾದನೀಯ. ಕರೋನಾ ಸಂದರ್ಭ ಜೀವಪಣಕ್ಕಿಟ್ಟು ಕೆಲಸ ಮಾಡಿದರು.
ಬಡ ನೌಕರರ ಬೇಡಿಕೆಗೆ ಸ್ಪಂದಿಸದೆ ಇರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಡಾ. ಪ್ರಕಾಶ್ ಕುಮಾರ್, ಕಾರ್ಯದರ್ಶಿ ವಿಶ್ವನಾಥ ಪ್ರಮುಖರಾದ ಶಿಲ್ಪ ಬಿ. ರಾವ್, ಡೇವಿಡ್ ಡಿಸೋಜಾ ಸುಜಾತ ಆರ್., ಹೇಮಪ್ರಭಾ ನೇತೃತ್ವ ವಹಿಸಿದ್ದರು.