ಬಂಟ್ವಾಳ: ಜೀವನಕ್ಕೆ ಅವಶ್ಯ ಎನ್ನಿಸಿದ ಶಿಕ್ಷಣ ಮಕ್ಕಳಿಗೆ ಹೆಚ್ಚು ಪ್ರಿಯವಾಗಿರುತ್ತದೆ ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಶೈಕ್ಷಣಿಕ ಸಂವೇದನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂಪಿ ಹೇಳಿದ್ದಾರೆ.
ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತುದಿನಗಳ ಕಾಲ ಶಿಕ್ಷಕರಿಗಾಗಿ ನಡೆದ ಕಂಪ್ಯೂಟರ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸಿದ್ಧಕಟ್ಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಮಾನಂದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣ ಸಂಯೋಜಕಿ ಸುಶೀಲಾ ಮಾತನಾಡಿ, ಸಿದ್ಧಕಟ್ಟೆ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ ರಮಾನಂದ ಹಾಗೂ ಶಿಕ್ಷಕ ವೃಂದದ ಸಂಘಟಿತ ಪ್ರಯತ್ನದಿಂದ ವಿಶಿಷ್ಟ ಶಾಲೆಯಾಗಿ ಗುರುತಿಸಿಕೊಂಡಿರುವುದು ಹೆಮ್ಮೆ ತಂದಿದೆ ಎಂದರು. ಪತ್ರಕರ್ತ ಮೌನೇಶ ವಿಶ್ವಕರ್ಮ, ಸಂಪನ್ಮೂಲ ವ್ಯಕ್ತಿ ಗಳಾದ ಜೋಯಲ್ ಲೋಬೋ, ಮಹೇಶ್ ಕುಮಾರ್ ವಿ.ಕರ್ಕೇರಾ, ಪೂರ್ಣಿಮ ಕರ್ಕೇರ, ಜೋಸ್ಲಿನ್ ಲವೀನಾ ವೇದಿಕೆಯಲ್ಲಿದ್ದರು. ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದ ಶಿಕ್ಷಕರಾದ ಅಬೂಬಕ್ಕರ್ ಸಿದ್ದಿಕ್ ಕೊಡ್ಮಾಣ್, ಜಯಲಕ್ಷ್ಮಿ ಕಲ್ಲರಕೋಡಿ, ಅನಸೂಯ ಕಾಡುಮಠ, ಲವೀನಾ ಮೊಂಟೆಪದವು ಅನಿಸಿಕೆ ವ್ಯಕ್ತಪಡಿಸಿದರು. ಬೆಂಜನಪದವು ಕಲಾಶಿಕ್ಷಕ ದೇವದಾಸ್ ಸ್ವಾಗತಿಸಿದರು. ವಾಮದಪದವು ಶಿಕ್ಷಕಿ ವೈಲೆಟ್ ಲೆನ್ನಿ ಡಯಾಸ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.