ಬಂಟ್ವಾಳ: ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಗ್ರಾಮಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಬೀಸಿರೋಡ್ ಹೋಟೇಲ್ ರಂಗೋಲಿ ಸಭಾಂಗಣದಲ್ಲಿ ಜರುಗಿತು.
ಬಂಟ್ವಾಳ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಪಕ್ಷದ ಸಲಹೆ ಸೂಚನೆಗಳನ್ನು ಜವಾಬ್ದಾರಿಯುತ ಕಾರ್ಯಕರ್ತರಿಗೆ ತಿಳಿಸಿ ಬೂತ್ ಸಮಿತಿ ಸಕ್ರೀಯಗೊಳಿಸಬೇಕೆಂದರು.
ಬಂಟ್ವಾಳ ಕ್ಷೇತ್ರದ ಪಂಚಾಯತ್ ಚುನಾವಣೆಯ ಪ್ರಭಾರಿಗಳು, ಬಂಟ್ವಾಳ ಬೂಡಾದ ಅಧ್ಯಕ್ಷರಾದ ದೇವದಾಸ್ ಶೆಟ್ಟಿಯವರು ಅವಲೋಕನ ನಡೆಸಿದರು. ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ರಾಜ್ಯದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕೊರೋನ ಓಡಿಸಲು ವಾರಿಯರ್ಸ್ ಕೆಲಸ ಮಾಡಿದಂತೆ ನಮ್ಮ ಕಾರ್ಯಕರ್ತರು ಬೂತಿನಿಂದ ಕಾಂಗ್ರೇಸನ್ನು ಓಡಿಸಲು ವಾರಿಯರ್ಸ್ ಗಳು ಆಗುವಂತೆ ಕರೆ ನೀಡಿದರು. ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷರು, ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ವಂದಿಸಿದರು. ಬಂಟ್ವಾಳ ಕ್ಷೇತ್ರ ಪಂಚಾಯತ್ ಚುನಾವಣೆಯ ಸಹಪ್ರಭಾರಿಗಳಾದ ಪ್ರಭಾಕರ ಪ್ರಭು, ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ವಿವಿದ ಸ್ತರದ ಜನಪ್ರತಿನಿಧಿಗಳು, ಸಹಕಾರಿ ಸಂಘಗಳ ಪ್ರಮುಖರು, ಬೂತ್ ಸಮಿತಿ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು, ವಿವಿದ ಮೋರ್ಚಗಳ ಪ್ರಮುಖರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…