ಬಂಟ್ವಾಳ: ಉತ್ತರ ಪ್ರದೇಶ ಘಟನೆ ಖಂಡಿಸಿ ಡಿವೈಎಫ್ ಐ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ಶುಕ್ರವಾರ ಸಂಜೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ದಲಿತ ಮುಖಂಡರಾದ ಭಾನುಚಂದ್ರ ಕೃಷ್ಣಾಪುರ, ಡಿವೈಎಫ್ಐ ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಜೆ.ಡಿ.ಎಸ್ ಮುಖಂಡರಾದ ಹಾರೂನ್ ರಶೀದ್, ದಲಿತ ಮುಖಂಡರಾದ ರಾಜಾ ಪಲ್ಲಮಜಲ್, ಪ್ರಜಾಪರಿವರ್ತನ ವೇದಿಕೆ ಮುಖಂಡರಾದ ಬಿ.ಟಿ.ಕುಮಾರ್, ಸತೀಶ್ ಅರಳ ಮುಂತಾದವರು ಮಾತನಾಡಿದರು. ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ ಸ್ವಾಗತಿಸಿದರು. ಕಲಾವಿದರಾದ ಜನಾರ್ಧನ ಕೆಸರಗದ್ದೆ, ಡಿವೈಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಮುಖಂಡರಾದ ಸಯ್ಯದ್ ರಿಯಾಜ್ ಬಂಟ್ವಾಳ, ನ್ಯಾಯವಾದಿ ಮಹಮ್ಮದ್ ಗಝಾಲಿ, ರಾಜಾ ಚೆಂಡ್ತಿಮಾರ್, ಕೃಷ್ಣಪ್ಪ ಪುದ್ದೊಟ್ಟು, ಮಹಮ್ಮದಾಲಿ ಮದಕ, ಅಲ್ತಾಪ್ ತುಂಬೆ, ಖಲೀಲ್ ಬಾಪು, ಬೂಡಾ ಮಾಜಿ ಸದಸ್ಯರಾದ ವೆಲೇರಿಯಾ, ಪುರಸಭಾ ಆಶ್ರಯ ಯೋಜನೆ ಸಮಿತಿಯ ಮಾಜಿ ಸದಸ್ಯರಾದ ತ್ರಿಶೀಲಾ , ಉಮೇಶ್ ವಾಮದಪದವು,ಪುನೀತ್ ರಾಜ್,ಪ್ರೀತಂ ಮುಂತಾದವರು ಭಾಗವಹಿಸಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…