ಬಂಟ್ವಾಳ: ಗಾಂಧೀಜಿಯವರು ಸ್ವಚ್ಛತೆ ಮತ್ತು ನಿರ್ಮಲವಾದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಭಜನೆಗಳು ಭಗವಂತನನ್ನು ತಲುಪುವ ಮಾರ್ಗ ಎಂದು ಅವರು ಭಾವಿಸಿದ್ದರು. ಅಂತೆಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಸರಳತೆ, ಪರಿಶ್ರಮ, ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದವರು. ದಿನ ನಿತ್ಯದ ಬದುಕಿನಲ್ಲಿ ಇಂತಹ ಆದರ್ಶಗಳನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ಪ್ರಿನ್ಸಿಪಾಲ್ ರಮಾಶಂಕರ್ ಸಿ ಹೇಳಿದರು. ಗಾಂಧಿ ಜಯಂತಿಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ಪಾಲ್ಗೊಂಡರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಕುರಿತ ಲೇಖನ ಹಾಗೂ ಭಜನೆಗಳ ಮೂಲಕ ಗೌರವ ಸಲ್ಲಿಸಲಾಯಿತು. ಚಂದ್ರಿಕಾ ಪಿ ಕಾರ್‍ಯಕ್ರಮ ನಿರ್ವಹಿಸಿದರು.