ಬಂಟ್ವಾಳ: ದ.ಕ. ವಾದ್ಯವಾದಕರ ಸಂಘದ ಬಂಟ್ವಾಳ ಘಟಕ ಪದಾಧಿಕಾರಿಗಳ ಆಯ್ಕೆ ಮತ್ತು ಉದ್ಘಾಟನಾ ಸಮಾರಂಭ ಪಾಣೆಮಂಗಳೂರಿನ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ವಹಿಸಿದ್ದರು.
ತುಳುನಾಡ ಗಾನಗಂಧರ್ವ, ದ.ಕ ಜಿಲ್ಲಾ ರಾಜ್ಯೋತ್ಸವ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಹಿರಿಯ ಸ್ಯಾಕ್ಸಫೋನ್ ಮತ್ತು ಕ್ಲಾರಿಯೋನೆಟ್ ಕಲಾವಿದರಾದ ಸುಂದರ ಜೋಗಿ ಪೊರ್ಕೋಡಿ,ಮಂಗಳೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನ್ಯಾಯವಾದಿ ಹರೀಶ್ ಸಂಕೇಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಾದ್ಯ ಕಲಾವಿದರನ್ನು ಗೌರವಿಸಲಾಯಿತು. ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ವಾದ್ಯ ವಾದಕರ ಸಂಘದ ನೂತನ ಪದಾಧಿಕಾರಿಗಳಾಗಿ ಕಶೇಕೋಡಿ ಸೂರ್ಯನಾರಾಯಣ ಭಟ್ (ಗೌರವಾಧ್ಯಕ್ಷ), ಹರೀಶ್ ಸಂಕೇಶ (ಗೌರವ ಸಲಹೆಗಾರರು). ರಮೇಶ್ ಮಿತ್ತನಡ್ಕ (ಅಧ್ಯಕ್ಷರು), ಬಿ. ಭೋಜ ಮತ್ತು ಜನಾರ್ದನ್ (ಉಪಾಧ್ಯಕ್ಷರು), ಸದಾಶಿವ ಮೊಗರ್ನಾಡು (ಕಾರ್ಯದರ್ಶಿ), ಸುಧೀರ್ (ಜೊತೆ ಕಾರ್ಯದರ್ಶಿ), ಗೌತಮ್ ಜಗದೀಶ್ (ಖಜಾಂಚಿ), ನಾಗೇಶ್ ಬಿ, ಹರೀಶ್ ವಗ್ಗ, ಪ್ರಸಾದ್ ಕಲ್ಲಡ್ಕ (ಸಂಘಟನಾ ಕಾರ್ಯದರ್ಶಿ), ಚಂದ್ರಶೇಖರ ಬುಡೋಳಿ, ರಾಜೇಶ್ ಪೊಳಲಿ, ಗಣೇಶನಾಥ್ ಸಜೀಪ, ಅಶೋಕ್ ತಲಪಾಡಿ, ಗೋಪಾಲ್ ಕಾಪು ಗೌರವ ಸದಸ್ಯರಾಗಿ ಆಯ್ಕೆಯಾದರು. ಕರಿಷ್ಮಾ ಜಗದೀಶ್ ಸ್ವಾಗತಿಸಿದರು. ರಂಜಿತ್ ಕಂಬಳಬೆಟ್ಟು ಪ್ರಾಸ್ತಾವಿಕ ಭಾಷಣ ಮಾಡಿದರು. ಹರ್ಷಿತ ರಮೇಶ್ ಮತ್ತು ರಂಜಿತ್ ನಂದಾವರ ಕಾರ್ಯಕ್ರಮವನ್ನು ನಿರ್ವಹಿಸಿದರು ಗೌರಿಲಕ್ಷ್ಮಿ.ಜಿ ವಂದಿಸಿದರು.