ಬಂಟ್ವಾಳ: ಗ್ರಾಮವಿಕಾಸ ಸಮಿತಿ ಮಂಗಳೂರುವಿಭಾಗ,ಪುತ್ತೂರು ವಿವೇಕಾನಂದ ವಿದ್ಯವರ್ಧಕ ಸಂಘ,ಸಹಕಾರ ಭಾರತಿ ದ.ಕ.ಜಿಲ್ಲೆ ಇವುಗಳ ಸಹಯೋಗದಲ್ಲಿ” ಬಂಟ್ವಾಳ ತಾಲೂಕು ಮಟ್ಟದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ”ವುಅ.5 ರಿಂದ10 ರವರೆಗೆ ಬಿ.ಸಿ.ರೋಡಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ ಎಂದು ಆರ್ .ಎಸ್.ಎಸ್.ನ ಪುತ್ತೂರುಜಿಲ್ಲಾ ಸಂಘ ಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಸ್ವ- ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಯುವಕ-ಯುವತಿಯರಿಗಾಗಿ15 ವಿಬಿನ್ನ ವಿಷಯಗಳಲ್ಲಿ 6 ದಿನಗಳ ಕಾಲ ಬೆ.10ಗಂಟೆಯಿಂದ ಸಂಜೆ 4ರವರೆಗೆ ಒಟ್ಟು 30 ಗಂಟೆ ತರಬೇತಿ ಶಿಬಿರ ನಡೆಯಲಿದೆ ಎಂದು ವಿವರಿಸಿದ್ದಾರೆ. ಪ್ರದಾನಿ ನರೇಂದ್ರಮೋದಿಯವರ ಆತ್ಮನಿರ್ಭರ ಭಾರತದ ಕನಸಿಗೆ ಪೂರಕವಾಗಿ ಈ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ನಡೆಯುತ್ತಿದ್ದು,ಸುಮಾರು 15 ವಿಷಯಗಳಿಗೆ ಸಂಬಂಧಿಸಿ ತಜ್ಞರು,ಅನುಭವಿಗಳು ತರಬೇತಿ ನೀಡಲಿದ್ದಾರೆ ಎಂದು ಕೊಡ್ಮಾಣ್ ಕಾಂತಪ್ಪ ಶೆಟ್ಟಿ ತಿಳಿಸಿದರು.
ಕೊರೋನ ಮಹಾಮಾರಿಯ ಈ ಸಂಕಟದ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಹೊಸ ಆಶಾಕಿರಣ ಮೂಡಿಸುವ ನಿಟ್ಟಿನಲ್ಲಿ ಮೂರು ಸಂಸ್ಥೆಗಳು ಒಟ್ಟಾಗಿ ಪ್ರಯತ್ನಿಸುತ್ತಿದೆ.ಮತ್ತು ಮುಂದೊನ ದಿನಗಳಲ್ಲಿ ಗ್ರಾಮ ಮಟ್ಟದಲ್ಲು ಇಂತಹ ಶಿಬಿರವನ್ನು ಆಯೋಜಿಸಲು ಯೋಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಂಗಳೂರು ವಿಭಾಗದ ಗ್ರಾಮವಿಕಾಸ ಸಮಿತಿ ಸಂಯೋಜಕ ವೆಂಕಟ್ರಮಣ ಹೊಳ್ಳ ಹೇಳಿದರು.
16 ವರ್ಷಕ್ಕಿಂತ ಮೇಲ್ಪಟ್ಟ ಸ್ತ್ರೀ,ಪುರುಷರು ತರಬೇತಿಗೆ ಅರ್ಹರಾಗಿದ್ದ,ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಈಗಾಗಲೇ 80 ಕ್ಕು ಹೆಚ್ಚುಮಂದಿ ಆಸಕ್ತರು ಹೆಸರನ್ನು ನೋಂದಾಯಿಸಿದ್ದು,ಸುಮಾರು 200 ಕ್ಕು ಹೆಚ್ಚುಮಂದಿ ಶಿಬಿರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.ಶಿಬಿರದಲ್ಲಿ ಕೋವಿಡ್-19 ಮುಂಜಾಗೃತಾ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದಾಮೋದರ ನೆತ್ತರಕೆರೆ, ವಿನೋದ್ ಕುಮಾರ್ ಕೊಡ್ಮಾಣ್,ಮಣಿಮಾಲಾ ಕುಪ್ಪಿಲ,ದಿವಾಕರ ಶೆಟ್ಟಿ ಕುಪ್ಪಿಲ ಮೊದಲಾದವರಿದ್ದರು.