ಬಂಟ್ವಾಳ: ಹವಮಾನ ಆಧಾರಿತ ಫಸಲು ಭೀಮಾ ಯೋಜನೆಯಲ್ಲಿ 2018-19 ನೇ ಸಾಲಿನ ಫಲಾನುಭವಿಗಳಿಗೆ ಪರಿಹಾರ ಮೊತ್ತವನ್ನ ಬಿಡುಗಡೆಗೊಳಿಸುವಂತೆ ಬಂಟ್ವಾಳ ತಾಪಂ ಸದಸ್ಯ, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಪತ್ರದ ಮೂಲಕ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹವಮಾನ ಆಧಾರಿತ ಫಸಲು ಭೀಮಾ ಯೋಜನೆಯಲ್ಲಿ 2018-19 ನೇ ಸಾಲಿನಲ್ಲಿ ಪ್ರೀಮಿಯಂ ಹಣ ಪಾವತಿಸಿದ ಕೆಲ ಫಲಾನುಭವಿಗಳಿಗೆ ಪಹಣಿಪತ್ರಿಕೆಯಲ್ಲಿ ಬೆಲೆ ನಮೂದು ಪ್ರಕಾರ ಹಣ ಬಿಡುಗಡೆಯಾಗಿದೆ. ಪ್ರೀಮಿಯಂ ಹಣ ಪಾವತಿಸಿದ ಇನ್ನು ಕೆಲ ರೈತರ ಪಹಣಿಪತ್ರಿಕೆಯಲ್ಲಿ ಬೆಳೆ ನಮೂದು ಆಗಿಲ್ಲ ಎಂಬ ಕಾರಣಕ್ಕೆ ಪರಿಹಾರ ಮೊತ್ತ ಪಾವತಿಯಾಗಿಲ್ಲ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಮೊತ್ತವನ್ನು ಶೀಘ್ರವಾಗಿ ಬಿಡುಗಡೆಗೊಳಸುವಂತೆ ಪ್ರಭು ಮನವಿಯಲ್ಲಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಬಿಪಿಎಲ್ ಪಡಿತರಕ್ಕೆ ಅರ್ಜಿ ಸ್ವೀಕರಿಸಿ: ಸರಕಾರದ ವಿವಿಧ ಯೋಜನೆಗೆ ಸಂಬಂಧಿಸಿ ಬಿಪಿಎಲ್ ಪಡಿತರ ಚೀಟಿ ಮಾನದಂಡವಾಗಿದ್ದು,ಆರ್ಹ ಫಲಾನುಭವಿಗಳು ಬಿಪಿಎಲ್ ಪಡಿತರ ಚೀಟಿ ಇಲ್ಲ ಎಂಬ ಕಾರಣಕ್ಕೆ ಸರಕಾರದ ಸವಲತ್ತು ಪಡೆಯುವಲ್ಲಿ ವಂಚಿತರಾಗುತ್ತಿರುವ ನಿಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿಸ್ವೀಕಾರಕ್ಕೆ ಅವಕಾಶ ಕಲ್ಪಿಸುವಂತೆ ತಾಪಂ ಸದಸ್ಯ ಪ್ರಭಾಕರ ಪ್ರಭು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಕೊರೋನಾದಿಂದಾಗಿ ಸ್ಥಗಿತಗೊಂಡಿದ್ದ ಆಧಾರ್ ಕಾಡ್೯ ಸಹಿತ ಎಲ್ಲ ಸಾರ್ವಜನಿಕ ಸೇವೆಗಳು ಆರಂಭವಾಗಿದ್ದು,ಬಿಪಿಎಲ್ ಪಡಿತರ ಚೀಟಿಗೂ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಿ ಪಡಿತರ ವಿತರಣೆಗೂ ಕ್ರಮಕೈಗೊಳ್ಳುವಂತೆ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.