ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬಂಟ್ವಾಳ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪೊಷಣ್ ಅಭಿಯಾನ ಮಾಸಾಚರಣೆ 2020 ಸಮಾರೋಪ ಸಮಾರಂಭ ಹಾಗೂ ಪೊಷಣ್ ಅಭಿಯಾನ ಮಾಸಾಚರಣೆಯ ಪುನವಲೋಕನ ಕಾರ್ಯಕ್ರಮ ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಪ್ರತಿಯೊಂದು ಕಾರ್ಯಕ್ರಮಗಳು ಮಹಿಳೆಯರ ಸರ್ವತೋಮುಖ ಪ್ರಗತಿಗೆ ಪೂರಕವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ಇದರ ಪ್ರಯೋಜನ ಪಡೆಯಬೇಕು ಎಂದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಕೌಟುಂಬಿಕ ದೌರ್ಜನ್ಯ ತಡೆ ವಿಭಾಗ ಆಪ್ತ ಸಮಾಲೋಚಕಿ ನ್ಯಾಯವಾದಿ ಆಶಾಮಣಿ ಡಿ. ರೈ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಉಪಸ್ಥಿತರಿದ್ದರು. ಬಂಟ್ವಾಳ ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಮೇಲ್ವಿಚಾರಕಿ ಬಿ. ಭಾರತಿ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಶಾಲಿನಿ ವಂದಿಸಿದರು. ಮೇಲ್ವಿಚಾರಕಿ ಸಿಂದು ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿಯರಾದ ಸರೋಜ ಭಟ್, ಸವಿತಾ ನವೀನ್, ನೀತಕುಮಾರಿ, ಸುಜಾತ, ತಾರದುರಗಪ್ಪ ಮಲ್ಲಜ್ಜಿಮಣಿ, ಯಶೋಧ ಪಿ. ಲೀಲಾವತಿ, ಶೋಭ ಎಮ್ , ಪ್ರಥಮ ದರ್ಜೆ ಸಹಾಯಕ ವಸಂತ ಕೆ ಹಾಜರಿದ್ದರು.