ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳಲಿದ್ದು, ರಾಜ್ಯದ ಮುಖ್ಯಮಂತ್ರಿಗಳು ಕೂಡ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಭರವಸೆ ನೀಡಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಗುರುವಾರ ಬಂಟ್ವಾಳ ಕ್ಷೇತ್ರದ ಸಜೀಪಮೂಡ ಮತ್ತು ಸಜೀಪಮುನ್ನೂರು ಗ್ರಾಮದಲ್ಲಿ ಒಟ್ಟು ೬ ಕೋ.ರೂ.ಅನುದಾನದ ಅಭಿವೃದ್ಧಿಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ಈ ಎರಡು ಗ್ರಾಮಗಳ ಜನತೆಯ ಬೇಡಿಕೆಯ ಮೇರೆಗೆ ಒಟ್ಟು ೬ ಕೋ.ರೂ. ಅಭಿವೃದ್ಧಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಕೊರೊನಾ ಹಿನ್ನಲೆಯ ಆರ್ಥಿಕ ಅಡಚಣೆಯ ಮಧ್ಯೆಯೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ದ.ಕ.ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಉದಯಕುಮಾರ್ ಕಾಂಜಿಲ, ಪ್ರವೀಣ್ ಗಟ್ಟಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಯಶವಂತ ದೇರಾಜೆ, ಗಣೇಶ್ ರೈ, ಜಯಶಂಕರ ಬಾಸ್ರಿತ್ತಾಯ, ವಿವೇಕ್ ಶೆಟ್ಟಿ ನಗ್ರಿಗುತ್ತು, ಯಶವಂತ ನಗ್ರಿ, ರವೀಶ್ ಶೆಟ್ಟಿ, ಸೀತಾರಾಮ ಅಗೋಳಿಬೆಟ್ಟು, ದಕ್ಷಣ್ ಮಿತ್ತಮಜಲು, ವೀರೇಂದ್ರ ಕುಲಾಲ್ ಕುಡುಮುನ್ನೂರು, ಕುಶಲ ಪೂಜಾರಿ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು ,ಸುರೇಶ್ ಪೂಜಾರಿ, ಜಯಪ್ರಕಾಶ್ ಪೆರ್ವ, ಸುರೇಶ್ ಬಂಗೇರ, ಪ್ರಶಾಂತ್ ಪೂಜಾರಿ ವಿಟ್ಲುಕೊಡಿ, ಸುಬ್ರಹ್ಮಣ್ಯ ಭಟ್, ನಳಿನ್ ರೈ, ಸರ್ವಾಣೆ ಆಳ್ವ, ದೀಪಿಕಾ, ವೆಂಕಟರಮಣ ಐತಾಳ್, ಸೀತಾರಾಮ ಪೂಜಾರಿ, ನವೀನ ಅಂಚನ್, ಸುಮತಿ ಎಸ್, ಗಿರಿಜಾ, ಅರವಿಂದ್ ಭಟ್, ವನಜಾಕ್ಷಿ, ವಿಶ್ವನಾಥ ಕೊಟ್ಟಾರಿ, ದಯಾನಂದ ಬಿ.ಎಂ., ಮನೋಹರ, ಎಂಜಿನಿಯರ್ ಕುಶಕುಮಾರ್, ರತ್ನಾಕರ್ ನಾಡಾರು, ಽÃರಜ್, ಶಿವಪ್ರಸಾದ್ ಕರೋಪಾಡಿ, ರಮೇಶ್ ರಾವ್, ಕೇಶವ ರಾವ್, ಪ್ರಶಾಂತ್ ಕಂಚಿಲ, ಕೃಷ್ಣಪ್ಪ ಬಂಗೇರ, ಇದಿನಬ್ಬ ನಂದಾವರ, ಪಾರೂಕ್ ನಂದಾವರ, ರೂಪೇಶ್ ಆಚಾರ್ಯ ಭಾಗವಹಿಸಿದ್ದರು.
ನಗ್ರಿಗುತ್ತಿನ ದೈವಸ್ಥಾನದ ಬಳಿ ೪೦ ಲಕ್ಷ ರೂ.ಗಳ ತಡೆಗೋಡೆ ಶಿಲಾನ್ಯಾಸದ ಸಂದರ್ಭದಲ್ಲಿ ಮುಂಡಪ್ಪ ಶೆಟ್ಟಿ ಸಜೀಪಗುತ್ತು, ರೋಹಿತ್ ಶೆಟ್ಟಿ ನಗ್ರಿಗುತ್ತು, ವಿವೇಕ್ ಶೆಟ್ಟಿ ನಗ್ರಿಗುತ್ತು, ಜಯರಾಮ್ ಶೆಟ್ಟಿ ನಗ್ರಿಗುತ್ತು, ಮಹಾಬಲ ರೈ ನಗ್ರಿಗುತ್ತು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಸಜೀಪಮೂಡದಲ್ಲಿ ಉದ್ಘಾಟನೆ: ಸಜಿಪಮೂಡ ಗ್ರಾಮದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಬ್ರಹ್ಮಶ್ರೀ ಗುರುಮಂದಿರ ಬಳಿಯಿಂದ ಮಸೀದಿಯವರೆಗೆ ರಸ್ತೆ ಅಭಿವೃದ್ಧಿ ಮತ್ತು ಇಂಟರ್‌ಲಾಕ್ ಅಳವಡಿಕೆ, 5 ಲಕ್ಷರೂ.ವೆಚ್ಚದಲ್ಲಿ ಕೊಳಕೆ ಪೆರ್ವ ರಸ್ತೆ ಕಾಂಕ್ರೀಟಿಕರಣ, 6 ಲಕ್ಷ ರೂ.ವೆಚ್ಚದಲ್ಲಿ ಕಂದೂರು ಸೈಟ್‌ನ ರಸ್ತೆ ಕಾಂಕ್ರಿಟಿಕರಣ, 12 ಲಕ್ಷ ರೂ.ವೆಚ್ಚದಲ್ಲಿ ಕಾರಾಜೆ ಶಾಲಾ ಬಳಿ ರಸ್ತೆ ಬದಿ ನಿರ್ಮಾಣವಾದ ತಡೆಗೋಡೆ,25 ಲಕ್ಷ ವೆಚ್ಚದಲ್ಲಿ ಸಂಕೇಶ ದೈವಸ್ಥಾನದ ಬಳಿ ನಿರ್ಮಾಣವಾದ ತಡೆಗೋಡೆಯನ್ನು ಶಾಸಕರು ಉದ್ಘಾಟಿಸಿದರು. ಶಿಲಾನ್ಯಾಸ : ಹಾಗೆಯೇ 10 ಲಕ್ಷ ವೆಚ್ಚದಲ್ಲಿ ಮಿತ್ತಮಜಲು ನಾಲ್ಕೈತ್ತಾಯ ದೈವಗಳ, ಉಳ್ಳಾಲ್ದಿ ರಸ್ತೆ ಕಾಂಕ್ರಿಟಿಕರಣ , 5 ಲಕ್ಷ ರೂ.ವೆಚ್ಚದಲ್ಲಿ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, 7 ಲಕ್ಷ ರೂ. ವೆಚ್ಚದಲ್ಲಿ ನಗ್ರಿ ನಾಡಾರ್‌ರಸ್ತೆ ಕಾಂಕ್ರಿಟಿಕರಣ,20 ಲಕ್ಷ ರೂ.ವೆಚ್ಚದಲ್ಲಿ ಮಿತ್ತಮಜಲು ರಸ್ತೆ ಕಾಂಕ್ರೇಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಸಜಿಪಮುನ್ನೂರು ಗ್ರಾಮದಲ್ಲಿ ಉದ್ಘಾಟನೆ: ಸಜೀಪಮುನ್ನೂರು ಗ್ರಾಪಂ ವ್ಯಾಪ್ತಿಯ ಆಲಾಡಿ-ಕೋಡಿಮಜಲು ರಸ್ತೆ 15 ಲ.ರೂ.ವೆಚ್ಚದಲ್ಲಿ ಡಾಮರೀಕರಣಗೊಳಿಸಿ ಅಭಿವೃದ್ಧಿಗೊಳಿಸಿದ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು. ಶಿಲಾನ್ಯಾಸ : ಆದೇರೀತಿ 5 ಲ.ರೂ.ವೆಚ್ಚದಲ್ಲಿ ನಂದಾವರ ರಸ್ತೆ ಕಾಂಕ್ರೀಟಿಕರಣ,12 ಲ.ರೂ.ವೆಚ್ಚದಲ್ಲಿ ಬೊಕ್ಕಸ ಪರಿಶಿಷ್ಟ ಪಂಗಡ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ , ಹಾಗೂ ಕೇಂದ್ರಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರ ಪ್ರದೇಶಾಭಿವೃದ್ದಿಯ 15 ಲಕ್ಷ ಮತ್ತು ಶಾಸಕರ ನಿಧಿಯ 35 ಲಕ್ಷ ಸೇರಿ ಒಟ್ಟು 50 ಲಕ್ಷ ರೂವೆಚ್ಚದಲ್ಲಿ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ರಸ್ತೆ ಅಭಿವೃದ್ಧಿ , 15 ಲಕ್ಷ ರೂ. ವೆಚ್ಚದಲ್ಲಿ ಮರ್ತಾಜೆ- ವರಕಾಯಿ-ಆಳ್ವರಪಾಲು-ಶಾಂತಿನಗರ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸವನ್ನು ಶಾಸಕರು ನೆರವೇರಿಸಿದರು.
ಇದೇ ವೇಳೆ 1 ಕೋ.ರೂ.ವೆಚ್ಚದಲ್ಲಿ ಸಜೀಪಮೂಡ ಸ.ಪ.ಪೂ.ಕಾಲೇಜ್ ಕಟ್ಟಡದ ಹಾಗೂ ಸಜೀಪಮುನ್ನೂರು ಬಹುಗ್ರಾಮದ ಕುಡಿಯುವ ನೀರಿನ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.