ಬಂಟ್ವಾಳ

ಬಿ.ಸಿ.ರೋಡ್: ರೈತ, ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ರಾಜಕೀಯ ಪಕ್ಷಗಳ ಸಾಥ್

ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಸರಕಾರ ಬಲವಂತವಾಗಿ ಜಾರಿಗೆ ತರುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಸಹಕಾರದಿಂದ ಬಿ.ಸಿ.ರೋಡಿನಲ್ಲಿ ಸೋಮವಾರ ಪ್ರತಿಭಟನಾ ಸಭೆ ಆಯೋಜಿಸಿತು.

ರೈತ ಸಂಘದೊಂದಿಗೆ ಎ.ಐ.ವೈ.ಎಫ್, ಡಿ.ವೈ.ಎಫ್.ಐ, ಮಾನವ ಬಂಧುತ್ವ ವೇದಿಕೆ, ಪ್ರಜಾಪರಿವರ್ತನಾ ವೇದಿಕೆ, ದಲಿತ ಸೇವಾ ಸಮಿತಿ, ಎನ್.ಎಫ್.ಐ.ಡಬ್ಲ್ಯು, ಎ.ಐ.ಟಿ.ಯು.ಸಿ., ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ, ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಎಸ್.ಡಿ.ಪಿ.ಐ., ಸಿಪಿಐ, ಸಿಪಿಎಂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು. ಪ್ರತಿಭಟನೆ ಕೊನೆಯಲ್ಲಿ ರಸ್ತೆ ತಡೆ ನಡೆಸಲು ಉದ್ದೇಶಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ರೈತಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ತಾಲೂಕು ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಜೆಡಿಎಸ್ ನಿಂದ ರಾಜ್ಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್, ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಸಿಪಿಐ, ಸಿಪಿಎಂ, ಎ.ಐ.ವೈ.ಎಫ್, ಡಿ.ವೈ.ಎಫ್.ಐ, ಮಾನವ ಬಂಧುತ್ವ ವೇದಿಕೆ, ಪ್ರಜಾಪರಿವರ್ತನಾ ವೇದಿಕೆ, ದಲಿತ ಸೇವಾ ಸಮಿತಿ, ಎನ್.ಎಫ್.ಐ.ಡಬ್ಲ್ಯು, ಎ.ಐ.ಟಿ.ಯು.ಸಿ., ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಗಳ ಮುಖಂಡರಾದ ರಾಮಣ್ಣ ವಿಟ್ಲ, ಉದಯಕುಮಾರ್ ಬಂಟ್ವಾಳ, ಬಿ.ಶೇಖರ್, ಸುರೇಶ್ ಕುಮಾರ್, ಬಾಬು ಭಂಡಾರಿ, ಮಹಮ್ಮದ್ ಇಕ್ಬಾಲ್ ಹಳೆಮನೆ, ಲಿಯಾಖತ್ ಖಾನ್, ಜನಾರ್ದನ ಪ್ರಭು, ಭಾರತಿ ಪ್ರಶಾಂತ್, ಸರಸ್ವತಿ ಕಡೇಶಿವಾಲಯ, ಗುಣಕರ, ಪ್ರಭಾಕರ ದೈವಗುಡ್ಡೆ, ರಾಜಾ ಚಂಡ್ತಿಮಾರ್, ಸುರೇಂದ್ರ ಕೋಟ್ಯಾನ್, ತುಳಸೀದಾಸ್ ವಿಟ್ಲ, ಸೇಸಪ್ಪ ಬೆದ್ರಕಾಡು,ಉಮೇಶ್ ಕುಮಾರ್ ವೈ, ಜೆಡಿಎಸ್ ನಿಂದ ರಾಜ್ಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್, ಮುಖಂಡರಾದ ಪಿ.ಎ.ರಹೀಂ, ಅಮಾನುಲ್ಲಾ, ಖೈರುನ್ನೀಸಾ, ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್, ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್, ಉಪಾಧ್ಯಕ್ಷ ಇಕ್ಬಾಲ್ ಐಎಂಆರ್, ಕ್ಷೇತ್ರಾಧ್ಯಕ್ಷ ಯುಸುಫ್ ಆಲಡ್ಕ, ಪುರಸಭಾ ಸಮಿತಿ ಅಧ್ಯಕ್ಷ ಮೊನೀಶ್ ಆಲಿ, ಗೌರ್ ತುಂಬೆ, ಎಸ್.ಡಿ.ಪಿ.ಯು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲಿಕ್ ಕೊಳಕೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ತಾಪಂ ಸದಸ್ಯ ಸಂಜೀವ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಲುಕ್ಮಾನ್, ಮುಖಂಡರಾದ ಚಂದ್ರಶೇಖರ ಪೂಜಾರಿ, ಪ್ರಶಾಂತ್ ಕುಲಾಲ್, ಚಿತ್ತರಂಜನ್ ಶೆಟ್ಟಿ, ಜಗದೀಶ ಕೊಯ್ಲ, ಸದಾನಂದ ಕುಲಾಲ್ ರಾಯಿ, ಯತೀಶ್ ಶೆಟ್ಟಿ ವಾಮದಪದವು, ಪ್ರಶಾಂತ್ ಜೈನ್ ಇರ್ವತ್ತೂರು, ಆದಂ ಕುಂಞ, ಜಗನ್ನಾಥ ಭಂಡಾರಿ ತುಂಬೆ, ರಝಾಕ್ ಕುಕ್ಕಾಜೆ, ಮಲ್ಲಿಕಾ ಶೆಟ್ಟಿ, ಐಡಾ ಸುರೇಶ್, ರಫೀಕ್ ಕೆಳಗಿನಪೇಟೆ ಬಂಟ್ವಾಳ, ವಿನೋದ್ ರಾಜ್ ರಾಯಿ, ಸುಧೀರ್ ಶೆಟ್ಟಿ ಇರ್ವತ್ತೂರು, ಸುರೇಶ ಪೂಜಾರಿ ಪಂಜಿಕಲ್ಲು, ವಿಶ್ವನಾಥ ಗೌಡ ಮಣಿ, ವಲಾರ್ ಬಡ್ಡಕಟ್ಟೆ, ವೆಂಕಪ್ಪ ಪೂಜಾರಿ, ಮಹಮ್ಮದ್ ನಂದರಬೆಟ್ಟು, ಅಮ್ಮು ರೈ, ರಿಚರ್ಡ್ ಮೆನೇಜಸ್ ಅಮ್ಟಾಡಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ರೈತರು, ಕಾರ್ಮಿಕರ ಬದುಕಿಗೆ ಸಂಬಂಧಿಸಿದ ಮಸೂದೆಗಳನ್ನು ಕೇಂದ್ರದ ಮೋದಿ ಸರಕಾರ ಯಾವುದೇ ಚರ್ಚೆಗಳಿಲ್ಲದೆ ಅಂಗೀಕರಿಸುತ್ತಿದೆ. ಇದರಿಂದ ಕಾರ್ಮಿಕರನ್ನು ಯಾವುದೇ ಪ್ರತಿರೋಧಗಳಿಲ್ಲದೆ ಕೆಲಸಗಳಿಂದ ಕಿತ್ತು ಹಾಕಲು, ಸವಲತ್ತುಗಳನ್ನು ನಿರಾಕರಿಸಲು ಮಾಲಕರಿಗೆ ಅನುಕೂಲ ಒದಗಿಸಿದೆ‌. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳಂತೂ ರೈತರನ್ನು ಪೂರ್ಣವಾಗಿ ಕಾರ್ಪೊರೇಟ್ ಶಕ್ತಿಗಳಿಗೆ ಶರಣಾಗುವಂತೆ ರೂಪಿಸಲಾಗಿದೆ‌. ಈ ಕಾಯ್ದೆಗಳು ರೈತರನ್ನು ಮಾತ್ರವಲ್ಲದೆ ಜನ ಸಾಮಾನ್ಯರ ಆಹಾರದ ಹಕ್ಕಿನ ಮೇಲೆಯೂ ದಾಳಿ ನಡೆಸುತ್ತದೆ. ಇಂತಹ ಮಸೂದೆಗಳನ್ನು ಯಾವುದೇ ಚರ್ಚೆಗಳಿಲ್ಲದೆ, ಸರ್ವಾಧಿಕಾರಿ ನಡೆಗಳ ಮೂಲಕ ಅಂಗೀಕರಿಸಿರುವುದು ದೇಶದ ಭವಿಷ್ಯದ ನಿಟ್ಟಿನಲ್ಲಿ ಅಪಾಯಕಾರಿ‌. ಈಗಾಗಲೆ ನಿರುದ್ಯೋಗದಿಂದ ಯುವ ಜನತೆ ಬೀದಿಗೆ ಬೀಳುತ್ತಿರುವ ಸಂದರ್ಭದಲ್ಲಿ ರೈತರ, ಕಾರ್ಮಿಕರ ಮೇಲೂ ಗದಾ ಪ್ರಹಾರ ಎಸಗುವುದು ಸಹಿಸಲಾಗದ ಸಂಗತಿ. ಇದು ದೇಶದಲ್ಲಿ ಹಾಹಾಕಾರವನ್ನು ಸೃಷ್ಟಿಸಲಿದೆ. ದೇಶವನ್ನು ಪೂರ್ಣವಾಗಿ ಕಾರ್ಪೊರೇಟ್ ಬಂಡವಾಳದಾರರ ಕಪಿಮುಷ್ಟಿಯಲ್ಲಿ ಸಿಲುಕಿಸಲಿದೆ. ಇಂತಹ ಆತಂಕಕಾರಿ ವಿದ್ಯಮಾನದ ವಿರುದ್ದ ರೈತರು, ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ