ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡ್ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಯಿತು.
ದೇಶದ ಬೆನ್ನೆಲಬು ಆಗಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ಇನ್ನಷ್ಟು ಬಡತನಕ್ಕೆ ತಳ್ಳುವ ಹಾಗೂ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಖರೀದಿಸಲು ಅನುವು ಮಾಡಿ ಕೊಟ್ಟ ಸರಕಾರದ ಕ್ರಮವನ್ನು ಎಸ್.ಡಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಖಂಡಿಸಿದರು.
ಪ್ರತಿಭಟನೆ ಯನ್ನು ಉದ್ದೇಶಿಸಿ ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಐ.ಎಂ.ಆರ್, ಕ್ಷೇತ್ರ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಯೂಸುಫ್ ಆಲಡ್ಕ ಮಾತಾಡಿದರು. ಪುರಸಭಾ ಸದಸ್ಯರಾದ ಮುನೀಶ್ ಅಲಿ ಸಮಿತಿ ಉಪಾಧ್ಯಕ್ಷರಾದ ಉಬೈದ್ ಬಂಟ್ವಾಳ ರೌಫ್ ಕಲಾಯಿ ಜೊತೆ ಕಾರ್ಯದರ್ಶಿಗಳಾದ ಸಲೀಂ ಅಲಾಡಿ, ಮಲಿಕ್ ಕೊಳಕೆ ಉಪಸ್ಥಿತರಿದ್ದರು. ಬಳಿಕ ತಾಲೂಕು ದಂಡಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಮಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…