ಬಂಟ್ವಾಳ ತಾಲೂಕಿನ ಕೇಂದ್ರಸ್ಥಳವಾದ ಹೋಟೆಲ್ ಚಿಕೋರಿ ಬಳಿ ಇರುವ ರಾಜೀವಿ ಪುಂಡಲೀಕ ಎನ್ ಕ್ಲೇವ್ ನಲ್ಲಿ ಕಂಟ್ರಿ ಈ ವ್ಹೀಲ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ಅನಾವರಣಗೊಳ್ಳಲಿದೆ. ಪರಿಸರ ಸ್ನೇಹಿಯಾಗಿರುವ ಹೊಸ ವಿನ್ಯಾಸಗಳಿಂದ ಕೂಡಿದ ಚಾರ್ಜ್ ಮಾಡಲು ಸುಲಭವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ.
ಈ ವಿಷಯವನ್ನು ಪ್ರವರ್ತಕರಾದ ಡೆನ್ನಿಸ್ ಲೋಬೊ ಮತ್ತು ಪ್ರವರ್ತಕರ ಪರವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳಿಗೆಯನ್ನು ಹಿರಿಯರಾದ ಎಲಿಜಾ ಲೋಬೊ ಮತ್ತು ಮಾರ್ಸೆಲಿನ್ ಫೆರ್ನಾಂಡಿಸ್ ಉದ್ಘಾಟಿಸುವರು, ಮೊಡಂಕಾಪು ಚರ್ಚ್ ಧರ್ಮಗುರು ಅ|ವಂ| ವಲೇರಿಯನ್ ಡಿಸೋಜಾ ಹಾಗೂ ಅಲ್ಲಿಪಾದೆ ಚರ್ಚ್ ಧರ್ಮಗುರುಗಳಾದ ವಂ|ಫೆಡ್ರಿಕ್ ಮೊಂತೆರೊ ಆಶೀರ್ವಚನ ನೀಡುವರು. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಗೌರವ ಅತಿಥಿಗಳಾಗಿ ಸ್ಥಳೀಯ ಪುರಸಭಾ ಸದಸ್ಯೆ ಜಯಂತೀ ವಸಂತ್, ಇ ಕಾರ್ಬನ್ ನ್ಯೂಟ್ರಾಲಿಟಿ ಮಾರ್ಕೆಟಿಂಗ್ ಮುಖ್ಯಸ್ಥ ಸತೀಶ್ ಶೆಟ್ಟಿ, ವಿತರಕ ಪದ್ಮರಾಜ ಮೊಯ್ಲಿ, ಸುರೇಶ್ ಶೆಟ್ಟಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರವರ್ತಕರಾದ ಡೆನಿಸ್ ಲೋಬೊ ವಹಿಸಲಿದ್ದಾರೆ ಎಂದವರು ತಿಳಿಸಿದರು.
ರೋಷನ್ ಲೋಬೊ, ದೀಪಕ್ ಲಸ್ರಾದೊ, ಐರಿನ್ ಕ್ಯಾಸ್ತೆಲಿನೋ, ಕಂಟ್ರಿ ಇ-ವ್ಹೀಲ್ ಸಂಸ್ಥೆ ಮತ್ತು ಕಾರ್ಬನ್ ನ್ಯೂಟ್ರಾಲಿಟಿ ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆದರದ ಸ್ವಾಗತವನ್ನು ಬಯಸುತ್ತಿದ್ದಾರೆ ಎಂದರು. ಸಂಯೋಜಕಿ ಅನಿತಾ ಲೋಬೊ ಮತ್ತು ದೀಪಕ್ ಲಸ್ರಾದೊ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಏನು ಪ್ರಯೋಜನ: ನೋಂದಾವಣಿಯ ಅವಶ್ಯಕತೆ ಇರುವುದಿಲ್ಲ. ವೇಗದ ಮಿತಿ ಗಂಟೆಗೆ 45 ಕಿ.ಮೀ. ಪರವಾನಗಿಯ ಅಗತ್ಯ ಇದಕ್ಕಿಲ್ಲ. ರಸ್ತೆ ತೆರಿಗೆ ಇರುವುದಿಲ್ಲ. ಮಾಲಿನ್ಯರಹಿತ ವಾಹನ ಇದಾಗಿರುತ್ತದೆ. ಪರಿಸರ ಸ್ನೇಹಿಯಾಗಿರುವ ಈ ವಾಹನಕ್ಕೆ ರಿಮೋಟ್ ಕಂಟ್ರೋಲ್ ಹೊಂದಿರುವ ಕೇಂದ್ರ ಲಾಕ್ ವ್ಯವಸ್ಥೆ ಇದೆ. ಕಳ್ಳತನವಾದರೆ ಎಚ್ಚರಿಕೆಯನ್ನು ಸೂಚಿಸುತ್ತದೆ. ರಿವರ್ಸ್ ಗೇರ್ ಸೌಲಭ್ಯವಿದೆ. ಸೆನ್ಸರ್ ಸಿಸ್ಟಮ್ ಅಳವಡಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಸುಲಭವಾಗಿ ಚಾರ್ಜ್ ಮಾಡುವಂತೆ ಸುಧಾರಿತ ಮತ್ತು ಆಧುನಿಕ ವಿನ್ಯಾಸದ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದಕ್ಕೆ ಇನ್ಶೂರೆನ್ಸ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಕಿಲೊಮೀಟರ್ ಗೆ 10 ಪೈಸೆಯಷ್ಟೇ ಖರ್ಚು. ಲಿಥಿಯಂ ಬ್ಯಾಟರಿಯ ಮೂರು ವರ್ಷ ವಾರಂಟಿಯೂ ಇದಕ್ಕಿದೆ ಎಂದು ಮಾಹಿತಿ ನೀಡಿದರು.