ಬಂಟ್ವಾಳ: ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ ಬಂಟ್ವಾಳ ಕ್ಷೇತ್ರದ ಸಹಯೋಗದಲ್ಲಿ ಮಾಣಿ ಪೆರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಪ್ತಾಹದಂಗವಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ವಿಠಲ್ ನಾಯ್ಕ್ ಬಾಳ್ತಿಲ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎನ್. ಎರ್ಮೆನಾಡ್, ಕಾರ್ಯಕಾರಿಣಿ ಸದಸ್ಯರುಗಳಾದ ಜಯರಾಮ್ ನಾಯ್ಕ್ ಕುಂಟ್ರಕಲ, ಶಿವಪ್ಪ ನಾಯ್ಕ್ ಪೆರ್ನೆ, ಬಂಟ್ವಾಳ ಕ್ಷೇತ್ರ ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ರಾಮ ನಾಯ್ಕ್ ಕುಕ್ಕಿನಾರು, ಉಪಾದ್ಯಕ್ಷರಾದ ಕೆ.ಟಿ. ನಾಯ್ಕ್ ಪೆರಾಜೆ, ಪುರುಷೋತ್ತಮ ನಾಯ್ಕ್ ನರಿಕೊಂಬು, ಪ್ರಧಾನ ಕಾರ್ಯದರ್ಶಿಗಳಾದ ಯಶವಂತ ನಗ್ರಿ, ಸತೀಶ್ ನಾಯ್ಕ್ ಕೊಳ್ನಾಡು, ಕಾರ್ಯಕಾರಿಣಿ ಸದಸ್ಯರುಗಳಾದ ರಾಜೇಶ್ ಕಲ್ಲಡ್ಕ, ಮನೋಜ್ ಮಂಚಿ, ಪ್ರಶಾಂತ್ ಮಂಚಿ, ಹೊನ್ನಪ್ಪ ನಾಯ್ಕ್ ಪೆರಾಜೆ, ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಪುಟ್ಟರಂಗನಾಥ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹನ್ ಸಾಲ್ಯಾನ್ ಪೆರಾಜೆ ಹಾಗು ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಚಂದ್ರಶೇಖರ ಪೆರ್ನೆ ಸಹಕರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…