ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಎಂಬಲ್ಲಿ ಪರಿಶಿಷ್ಟ ಜಾತಿಯ ಬಾಬು ಎಂಬವರ ಮನೆಯು ಭಾನುವಾರ ಸುರಿದ ಭಾರಿ ಮಳೆಗೆ ಬಿದ್ದು ಪೂರ್ತಿ ಜಖಂಗೊಂಡಿರುತ್ತದೆ. ಈ ಸಂದರ್ಭ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್.ಸಿ ಮೋರ್ಚಾ ವತಿಯಿಂದ ಭೇಟಿ ನೀಡಿ, 25 ಕೆಜಿ ಅಕ್ಕಿಯನ್ನು ನೀಡಲಾಯಿತು. ಎಸ್.ಸಿ ಮೋರ್ಚಾ ಬಂಟ್ವಾಳ ಅಧ್ಯಕ್ಷ ಕೇಶವ ದೈಪಲ ,ಪ್ರಧಾನ ಕಾರ್ಯಧರ್ಶಿ ರಮೇಶ್ ಕುಧ್ರೆಬೆಟ್ಟು ಶಾಸಕ ರಾಜೇಶ್ ನಾಯ್ಕ್ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರಲ್ಲಿ ತಿಳಿಸಿ ಸರಕಾರದ ವತಿಯಿಂದ ತುರ್ತಾಗಿ ಪರಿಹಾರ ಧನವನ್ನು ಮಂಜೂರುಗೊಳಿಸುವಂತೆ ಮನವಿ ಮಾಡಿದರು. ಮೋರ್ಚಾದ ಉಪಾಧ್ಯಕ್ಷರಾದ ಸಂತೋಷ್ ಬಿ.ಮೂಡ, ಕಾರ್ಯದರ್ಶಿ ಲೋಕೇಶ್ ಕೊಪ್ಪಲಕೋಡಿ, ಸದಸ್ಯರಾದ ಹರೀಶ್ ನಾವುರ ಹಾಗೂ ವಾಣಿ, ಭರತ್ ರಾಜ್, ರವಿರಾಜ್, ಹಿರಿಯರಾದ ಭವಾನಿ ಎಸ್, ಭವಾನಿ ಕೆ ಮುಂತಾದವರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…